Home ಜಾಲತಾಣದಿಂದ ಹಿಂದುತ್ವ ಸಂಘಟನೆಗಳು ಶಾಂತಿ‌ ಕದಡುವ, ಕಾನೂನು ಬಾಹಿರ ಕೆಲಸ ಮಾಡಿಲ್ಲ ಎಂದ ಪ್ರಮೋದ್​ ಮುತಾಲಿಕ್

ಹಿಂದುತ್ವ ಸಂಘಟನೆಗಳು ಶಾಂತಿ‌ ಕದಡುವ, ಕಾನೂನು ಬಾಹಿರ ಕೆಲಸ ಮಾಡಿಲ್ಲ ಎಂದ ಪ್ರಮೋದ್​ ಮುತಾಲಿಕ್

ಗದಗ: ಶಾಂತಿ‌ ಕದಡಿದ್ರೆ, ಸಂವಿಧಾನ ಶಕ್ತಿ ತೋರಿಸಬೇಕಾಗುತ್ತೆ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿರುವ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್​ ಮುತಾಲಿಕ್, ‘ಇದು ಎಲ್ಲರೂ ಹೇಳುವಂಥ ಮಾತು, ಯಾರೂ ಕೂಡ ಶಾಂತಿ‌ ಕದಡುವ ಕೆಲಸ ಮಾಡಲೇಬಾರದು. ಸಂವಿಧಾನ ಬದ್ಧವಾಗಿ, ಪ್ರಜಾಪ್ರಭುತ್ವದ ಆಧಾರದಲ್ಲಿ ಕಾನೂನ ಬದ್ಧ ಪ್ರಕ್ರಿಯೆ ಮಾಡಬೇಕು. ಶ್ರೀರಾಮಸೇನೆ, ವಿಶ್ವ ಹಿಂದೂ ಪರಿಷತ್​, ಭಜರಂಗದಳ ಸಂಘಟನೆಗಳು ಶಾಂತಿ‌ ಕದಡುವ ಅನಾವಶ್ಯಕ ಕಾನೂನ ಬಾಹಿರ ಯಾವುದೇ ಕೆಲಸ ಮಾಡಿಲ್ಲ, ಮಾಡುವುದೂ ಇಲ್ಲವೆಂದು ಹೇಳಿದ್ದಾರೆ.

ಗದಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ‘ಗೋಹತ್ಯೆ ನಿಷೇಧ ಇದ್ದರೂ ಕಸಾಯಿಖಾನೆಗೆ ಗೋವುಗಳು ಹೋಗುತ್ತಿವೆ. ಇದು ಸರ್ಕಾರಕ್ಕೆ, ಕಾಂಗ್ರೆಸ್​ನವರಿಗೆ ಹಾಗೂ ಪೊಲೀಸ್ ಇಲಾಖೆಗೂ ಗೊತ್ತು. ಅದನ್ನು‌ ನಿಲ್ಲಿಸದಿದ್ರೆ, ಹೋರಾಟ ಮಾಡಬೇಕಾಗುತ್ತೆ. ಅಲ್ಲಿ ಸಂಘರ್ಷ ಆದ್ರೆ, ಸರ್ಕಾರ, ಪೊಲೀಸ್ ಇಲಾಖೆಯೇ ನೇರ ಕಾರಣ. ಆಜಾನ್, ಮತಾಂತರ ತಡೆಯದಿದ್ರೆ, ಕಾಯ್ದೆ ಯಾಕೇ ಮಾಡ್ತೀರಿ ಎಂದು ಕಿಡಿಕಾರಿದ್ದಾರೆ.

Join Whatsapp
Exit mobile version