Home ಟಾಪ್ ಸುದ್ದಿಗಳು ಲೋಕಸಭೆಗೆ ಪ್ರಜ್ವಲ್ ರೇವಣ್ಣ ಸ್ಪರ್ಧೆ: ದೇವೇಗೌಡರ ತೀರ್ಮಾನವೇ ಅಂತಿಮ ಎಂದ ಹೆಚ್. ಡಿ ರೇವಣ್ಣ

ಲೋಕಸಭೆಗೆ ಪ್ರಜ್ವಲ್ ರೇವಣ್ಣ ಸ್ಪರ್ಧೆ: ದೇವೇಗೌಡರ ತೀರ್ಮಾನವೇ ಅಂತಿಮ ಎಂದ ಹೆಚ್. ಡಿ ರೇವಣ್ಣ

ಹಾಸನ: ಲೋಕಸಭೆಗೆ ಹಾಸನದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧೆ ವಿಚಾರವಾಗಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ತೆಗೆದುಕೊಂಡ ತೀರ್ಮಾನವೇ ಅಂತಿಮ. ಈ ಬಗ್ಗೆ ಪಕ್ಷ ಯಾವ ತೀರ್ಮಾನ ಮಾಡುತ್ತೆ ಅದಕ್ಕೆ ಬದ್ಧ ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಹೇಳಿದರು.

ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಭವಾನಿ ರೇವಣ್ಣ ಅವರದ್ದು ಚರ್ಚೆ ಆಗಿತ್ತು. ಜನಾಭಿಪ್ರಾಯ ಕೇಳಿದ್ದೆವು. ಪ್ರಾದೇಶಿಕ ಪಕ್ಷದ ಕುಟುಂಬದವರ ಸ್ಪರ್ಧೆ ಬೇಡ ಅಂತ ಬಿಲ್ ತರಲಿ ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಹೇಳಿದರು.


ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ, ಹೆಚ್ ಡಿ ದೇವೇಗೌಡರು ಹೊಡೆದಾಡುತ್ತಿದ್ದಾರೆಂದರೇ ಅದು ಭ್ರಮೆ. ಹೆಚ್.ಡಿ ದೇವೇಗೌಡರದ್ದು ಮುಗಿದೇ ಹೋಯ್ತು ಅಂದರು. ಕುಮಾರಸ್ವಾಮಿಯವರು ಆಶ್ವಾಸನೆ ಕೊಟ್ಟರೇ ಈಡೇರಿಸುತ್ತಾರೆ. ಬೆಳಗ್ಗೆ ಎದ್ದರೆ ದೇವೇಗೌಡರ ಕುಟುಂಬ ಅಂತೀರ. ಎರಡು ರಾಷ್ಟ್ರೀಯ ಪಕ್ಷಗಳ ಏಕೆ ಬಗ್ಗೆ ಮಾತನಾಡಲ್ಲ ಎಂದು ಪ್ರಶ್ನಿಸಿದರು.

Join Whatsapp
Exit mobile version