Home ಟಾಪ್ ಸುದ್ದಿಗಳು ಮುಂದಿನ ದಿನಗಳಲ್ಲಿ ಕಾಫಿ ಶಾಪ್ ಗಳಲ್ಲಿ ಬಟಾಟೆ ಹಾಲಿನದ್ದೇ ದರ್ಬಾರು

ಮುಂದಿನ ದಿನಗಳಲ್ಲಿ ಕಾಫಿ ಶಾಪ್ ಗಳಲ್ಲಿ ಬಟಾಟೆ ಹಾಲಿನದ್ದೇ ದರ್ಬಾರು

ಆಹಾರ ಹಕ್ಕುವಾದಿಗಳು ಆಲೂಗಡ್ಡೆಯಿಂದ ತೆಗೆದ ಹಾಲು ಬಟಾಟೆ ಹಾಲು 2022ರ ಅತಿ ದೊಡ್ಡ ಆಹಾರ ಮಾದರಿ ಆಗಲಿದೆ ಎಂದು ಡಂಗುರ ಸಾರಿ ಆಗಿದೆ ಎಂದು ವೈಟ್ ರೋಸ್ ವರದಿ ಮಾಡಿದೆ. ಸ್ವೀಡನ್ನಿನ ವೆಗ್ ಆಫ್ ಲುಂಡ್ ಕಂಪೆನಿಯು ಡಿಯುಜಿ ಹೆಸರಿನಲ್ಲಿ ಸಸ್ಯ ಮೂಲದ ಬದಲಿ ವ್ಯವಸ್ಥೆ ಎಂದು ಬಟಾಟೆ ಹಾಲನ್ನು ಪರಿಚಯಿಸಿದೆ. ಓಟ್ ಹಾಲಿಗೆ ಬೇಕಾದ ಅರ್ಧದಷ್ಟು ಮತ್ತು ಬಾದಾಮಿ ಹಾಲಿಗೆ ಅಗತ್ಯದ ಜಾಗದ 56ನೇ ಒಂದು ಪಾಲು ಜಾಗ ಬಟಾಟೆ ಹಾಲಿಗೆ ಸಾಕು ಎಂದು ಕಂಪೆನಿಯ ಸಿಇಓ ಥಾಮಸ್ ಓಲಾಂಡರ್ ದ ಗಾರ್ಡಿಯನ್ ಗೆ ಹೇಳಿದ್ದಾರೆ.


“ಮುಂದಿನ ದಿನಗಳಲ್ಲಿ ಕಾಫಿ ಶಾಪುಗಳಲ್ಲಿ ಬಟಾಟೆ ಹಾಲಿನದ್ದೇ ದರಬಾರು. ಕಡಿಮೆ ಸಕ್ಕರೆ, ಕಡಿಮೆ ನನೆಕೊಬ್ಬು ಇರುವ ಬಟಾಟೆ ಹಾಲಿನ ಕಾಲ ಮುಂದಿನದು” ಎಂದು ಇಂಡೆಪೆಂಡೆಂಟ್ ವರದಿ ಮಾಡಿದೆ. ಮುಂದಿನ ದಿನಗಳ ಆಹಾರ ಪ್ರವೃತ್ತಿಗಳಲ್ಲಿ ಉಮಾಮಿ ಪರಿಮಳಗಳು, ಅಕುಶಲ ಜೋಡಿಸಿದ ಬಾಟಲಿಗಳ ಕಾಕ್ ಟೇಲ್ ಮತ್ತು ಹವಾಮಾನವಾದಿ ತಿನಿಸು ಮೊದಲ ಸ್ಥಾನಗಳಲ್ಲಿ ನಿಲ್ಲುತ್ತವೆ.
ಹವಾಮಾನವಾದಿ ತಿನಿಸು ಎನ್ನುವುದು ವಾತಾವರಣದಲ್ಲಿ ಕಾರ್ಬನ್ ಪ್ರಮಾಣವನ್ನು ಕಡಿಮೆ ಮಾಡುವ ಆಹಾರಗಳಾಗಿವೆ. ಕ್ಲೈಮಟೇರಿಯನ್.ಕಾಮ್ ಪ್ರಕಾರ ಅಂಥ ಆಹಾರವು ಮುಂದಿನ ದಿನಗಳಲ್ಲಿ ಕ್ಯಾನ್ಸರ್, ಹೃದಯ ಬೇನೆ, ಪಕ್ಷವಾತ ಮೊದಲಾದ ತೊಂದರೆಗಳನ್ನು ತುಂಬ ಕಡಿಮೆ ಮಾಡುತ್ತದೆ.


ಕೆಂಪು ಮತ್ತು ಸಂಸ್ಕರಿಸಿದ ಮಾಂಸದ ಜೊತೆಗೆ ಉತ್ತಮ ಸಸ್ಯ ಪ್ರೋಟೀನುಗಳಾದ ನಟ್ ಗಳು, ಬೀಜಗಳು, ಕಡಲೆ, ಲೆಂಟಿಲ್ ಮಸೂರ್, ಸೋಯಾ ಮೊದಲಾದವನ್ನು ಆಹಾರದಲ್ಲಿ ಒಳಗೊಳ್ಳುವುದು ಒಳ್ಳೆಯದು. ಸಾಂಕ್ರಾಮಿಕ ಬಂದ ಮೇಲೆ ಜಗತ್ತಿನಲ್ಲಿ ಜನರು ಮನೆಯಲ್ಲೇ ಅಡುಗೆ ಮಾಡುವುದು, ಆಹಾರ ಪೋಲು ಮಾಡದಿರುವುದು, ಕಡಿಮೆ ಮಾಂಸ ತಿನ್ನುವುದು ಇಂಥದನ್ನು ರೂಢಿಸಿಕೊಂಡಿದ್ದಾರೆ ಎಂದೂ ವರದಿ ಹೇಳಿದೆ.


ಈ ಕಾಲದಲ್ಲಿ ಮಾಂಸ ತಿನ್ನುವುದನ್ನು ವಾರದಲ್ಲಿ ಎರಡು ದಿನಕ್ಕೆ ಇಳಿಸಿದ್ದಾಗಿ 82% ಜನರು ಹೇಳಿದರು. ನಾವು ಆಹಾರ ಪೋಲಾಗುವುದನ್ನು ತಡೆದೆವು ಎಂದು 75% ಮಂದಿ ತಿಳಿಸಿದರು. ಮನೆಗೆ ತರುವ ಪ್ಲಾಸ್ಟಿಕ್ ಪಾರ್ಸೆಲ್ ಪ್ರಮಾಣವನ್ನು ತೀರಾ ಕಡಿಮೆ ಮಾಡಿರುವುದಾಗಿ 70% ನಾಗರಿಕರು ತಿಳಿಸಿದರು. ಇದು ರೋಗ ತಂದ ವರವೆನ್ನುವುದು ಕಷ್ಟ.

Join Whatsapp
Exit mobile version