Home ಟಾಪ್ ಸುದ್ದಿಗಳು ಮುಸ್ಲಿಂ ಸಹ ವಿದ್ಯಾರ್ಥಿಗೆ ಕಿರುಕುಳ: ಸ್ನಾತಕೋತ್ತರ ವಿದ್ಯಾರ್ಥಿಯನ್ನು ಅಮಾನತುಗೊಳಿಸಿದ ವಿಶ್ವವಿದ್ಯಾಲಯ

ಮುಸ್ಲಿಂ ಸಹ ವಿದ್ಯಾರ್ಥಿಗೆ ಕಿರುಕುಳ: ಸ್ನಾತಕೋತ್ತರ ವಿದ್ಯಾರ್ಥಿಯನ್ನು ಅಮಾನತುಗೊಳಿಸಿದ ವಿಶ್ವವಿದ್ಯಾಲಯ

ಹೊಸದಿಲ್ಲಿ:  ಮುಸ್ಲಿಮನಾದ  ಸಹ ವಿದ್ಯಾರ್ಥಿಯೊಬ್ಬನಿಗೆ ನಿಂದನಾತ್ಮಕ ಬೈಗುಳ ಮತ್ತು ದೈಹಿಕವಾಗಿ ಕಿರುಕುಳ ನೀಡಿದ ಆರೋಪದ ಮೇಲೆ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ವಿದ್ಯಾರ್ಥಿಯನ್ನು ಅಮಾನತುಗೊಳಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಅಮಾನತುಗೊಂಡ ವಿದ್ಯಾರ್ಥಿಯನ್ನು ಎಂಎ  ಸ್ನಾತಕೋತ್ತರ ವಿಭಾಗದ ರಿಷಿ ತಿವಾರಿ ಎಂದು ಗುರುತಿಸಲಾಗಿದೆ. ಮುಸ್ಲಿಂ ವಿದ್ಯಾರ್ಥಿಯೊಬ್ಬ ದ್ವೇಷದ ಅಪರಾಧದ ಬಗ್ಗೆ ದೂರು ನೀಡಿದ ನಂತರ, ವಿದ್ಯಾರ್ಥಿಗಳ ಗುಂಪು ಶಿಕ್ಷೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ಬಳಿಕ ರಿಷಿ ತಿವಾರಿಯನ್ನು ಅಮಾನತುಗೊಳಿಸಲಾಗಿದೆ.

ಮೇ 1 ರಂದು ಈ ಘಟನೆ ನಡೆದಿದ್ದು,  ಮುಸ್ಲಿಂ ವಿದ್ಯಾರ್ಥಿ ಕೆಜಿಎ ಹಾಸ್ಟೆಲ್ ಬಳಿ ಉಪವಾಸ ಮುರಿಯಲು ಬಂದಿದ್ದ ವೇಳೆ  ರಿಷಿ ತಿವಾರಿ ಆತನನ್ನು ನಿಂದಿಸಿ, ಆಹಾರವನ್ನು ಎಸೆದು, ಮುಖಕ್ಕೆ ಉಗುಳಿದ್ದಾನೆ ಎಂದು ತಿಳಿದು ಬಂದಿದೆ.

ರಿಷಿ ತಿವಾರಿಯು  ಆರ್‌ಎಸ್‌ಎಸ್‌ನ ವಿದ್ಯಾರ್ಥಿ ಸಂಘಟನೆಯಾದ ಎಬಿವಿಪಿ ಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು  ಪ್ರತಿಭಟನಾ ನಿರತ   ವಿದ್ಯಾರ್ಥಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.

Join Whatsapp
Exit mobile version