Home ಟಾಪ್ ಸುದ್ದಿಗಳು ಪಾಪ್ಯುಲರ್ ಫ್ರಂಟ್ ಯುನಿಟಿ ಮಾರ್ಚ್ ನೊಂದಿಗೆ ಹೆಜ್ಜೆ ಹಾಕಿದ ಸಹಸ್ರ ಸಂಖ್ಯೆಯ ಸಾರ್ವಜನಿಕರು

ಪಾಪ್ಯುಲರ್ ಫ್ರಂಟ್ ಯುನಿಟಿ ಮಾರ್ಚ್ ನೊಂದಿಗೆ ಹೆಜ್ಜೆ ಹಾಕಿದ ಸಹಸ್ರ ಸಂಖ್ಯೆಯ ಸಾರ್ವಜನಿಕರು

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ನಡೆದ ಯುನಿಟಿ ಮಾರ್ಚ್ ಉಳ್ಳಾಲದ ಭಾರತ್ ಪ್ರೌಢ ಶಾಲೆಯ ಮೈದಾನದಿಂದ ಪ್ರಾರಂಭವಾಗಿ ಮುಕ್ಕಚ್ಚೇರಿ ಮೂಲಕ ಸಾಗಿ ಬಂದು ಒಂಬತ್ತುಕೆರೆಯ ಅನಿಲ ಕಂಪೌಂಡ್ ಮೈದಾನದಲ್ಲಿ ಸಮಾನಪನಗೊಂಡಿತು.

ಪಾಪ್ಯುಲರ್ ಫ್ರಂಟ್ ಧ್ವಜ ಹಸ್ತಾಂತರದೊಂದಿಗೆ ಪಾಪ್ಯುಲರ್ ಫ್ರಂಟ್ ರಾಜ್ಯ ಉಪಾಧ್ಯಕ್ಷ ಅಯ್ಯೂಬ್ ಅಗ್ನಾಡಿ ಯುನಿಟಿ ಮಾರ್ಚ್ ಗೆ ಚಾಲನೆ‌ ನೀಡಿದರು.

ಈ ವೇಳೆ ಸಮವಸ್ತ್ರಧಾರಿ ಕೇಡರ್ ಗಳ ಆಕರ್ಷಕ ಪೆರೇಡ್ ಜೊತೆಗೆ ಸಹಸ್ರ ಸಂಖ್ಯೆಯ ಸಾರ್ವಜನಿಕರು ಹೆಜ್ಜೆ ಹಾಕಿದರು. ಬಿರು ಬಿಸಿಲ ಮಧ್ಯೆ ನಡೆದ ಜಾಥಾದಲ್ಲಿ ಕ್ರಾಂತಿ ಘೋಷಣೆಗಳು ಮತ್ತು ಕರತಾಡನ ಮುಗಿಲು ಮುಟ್ಟಿದ್ದವು.

Join Whatsapp
Exit mobile version