Home ಟಾಪ್ ಸುದ್ದಿಗಳು ಮೀ ಟೂ ಆರೋಪ | ಮಾನನಷ್ಟ ದಾವೆ ಹೂಡಿದ್ದ ಮಾಜಿ ಸಚಿವ ಎಂ.ಜೆ. ಅಕ್ಬರ್ ಗೆ...

ಮೀ ಟೂ ಆರೋಪ | ಮಾನನಷ್ಟ ದಾವೆ ಹೂಡಿದ್ದ ಮಾಜಿ ಸಚಿವ ಎಂ.ಜೆ. ಅಕ್ಬರ್ ಗೆ ಮುಖಭಂಗ; ಪ್ರಿಯಾ ರಮಣಿ ಕೇಸ್ ಖುಲಾಸೆ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ಸಚಿವರಾಗಿದ್ದ ಮಾಜಿ ಕೇಂದ್ರ ಸಚಿವ, ಪತ್ರಕರ್ತ ಎಂ.ಜೆ. ಅಕ್ಬರ್ ಅವರು ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ದಾಖಲಿಸಿದ್ದ ಮಾನಹಾನಿ ಪ್ರಕರಣ ಖುಲಾಸೆಗೊಂಡಿದೆ. ದೆಹಲಿಯ ಹೆಚ್ಚುವರಿ ಮುನ್ಸಿಪಲ್ ಕೋರ್ಟ್ ಪ್ರಕರಣದ ವಿಚಾರಣೆ ನಡೆಸಿ, ಪ್ರಕರಣದ ಆರೋಪಿ ಪ್ರಿಯಾ ರಮಣಿ ಅವರನ್ನು ಖುಲಾಸೆಗೊಳಿಸಿದೆ.

ಎಂ.ಜೆ. ಅಕ್ಬರ್ ವಿರುದ್ಧ ಪ್ರಿಯಾ ರಮಣಿ ‘ಮೀ ಟೂ’ ಆರೋಪ ಮಾಡಿದ್ದರು. ಮಹಿಳೆಯು ತನ್ನ ವಿರುದ್ಧದ ಅನ್ಯಾಯಕ್ಕೊಳಗಾಗಿದ್ದನ್ನು ಸಮಾಜದ ಎದುರು ಹೇಳಿಕೊಂಡಾಗ ಆಕೆಯನ್ನು ಶಿಕ್ಷಿಸಲಾಗುವುದಿಲ್ಲ ಎಂದು ಕೋರ್ಟ್ ತಿಳಿಸಿದೆ.

ತಾನು ಅನುಭವಿಸಿದ ಸಂಕಷ್ಟ, ನೋವುಗಳನ್ನು ಹೇಳಿಕೊಳ್ಳಲು ಮಹಿಳೆಗೆ ಸಂವಿಧಾನ ಮುಕ್ತ ಅವಕಾಶ ನೀಡಿದೆ. ಬಹುತೇಕ ಸಂದರ್ಭಗಳಲ್ಲಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯಗಳು ಮುಚ್ಚಿದ ಬಾಗಿಲು ಒಳಗೇ ನಡೆಯುತ್ತವೆ. ಹೀಗಾಗಿ ಮಹಿಳೆ ತನಗಾದ ಅನ್ಯಾಯವನ್ನು ಹೇಳಿಕೊಳ್ಳಲು ಮುಂದೆ ಬರುವುದಿಲ್ಲ ಎಂದು ನ್ಯಾಯಾಧೀಶ ರವೀಂದ್ರ ಕುಮಾರ್ ಪಾಂಡೆ ಹೇಳಿದ್ದಾರೆ.

Join Whatsapp
Exit mobile version