ಮಂಗಳೂರು: ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ಕೈಕಂಬ ಮತ್ತು ಪರ್ಲಿಯಾ ಹಾಗೂ ವೆನ್ಲಕ್ ಆಸ್ಪತ್ರೆ ಮಂಗಳೂರು ಸಹಭಾಗಿತ್ವದಲ್ಲಿ ಮಾರ್ಚ್ 27 ರಂದು ಆಲ್ ಕಝನಾ ಕಮ್ಯೂನಿಟಿ ಹಾಲ್ ತಲಪಾಡಿಯಲ್ಲಿ ಸಾರ್ವಜನಿಕ ರಕ್ತದಾನ ಶಿಬಿರ ನಡೆಯಿತು .
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ಕೈಕಂಬ ಇದರ ಅಧ್ಯಕ್ಷರಾದ ರಫೀಕ್ ಶಾಂತಿ ಅಂಗಡಿ ವಹಿಸಿದರು
ಉದ್ಘಾಟನೆ ಭಾಷಣವನ್ನು ಯಾಕೂಬ್ ಫೈಝಿ ಖತೀಬರು ಬದ್ರಿಯಾ ಜುಮಾ ಮಸ್ಜಿದ್ ತಲಪಾಡಿ ನಡೆಸಿಕೊಟ್ಟರು .ಮುಖ್ಯ ಅತಿಥಿಗಳಾಗಿ ಆಗಮಿಸಿದ ಜನಾಬ್ ಇಂತಿಯಾಜ್ ತುಂಬೆ ರಕ್ತದಾನ ಮಾಡುವ ಮೂಲಕ ಯುವಕರು ಸಮಾಜಮುಖಿ ಕಾರ್ಯದಲ್ಲಿ ತೊಡಕಿಸಿಕೊಳ್ಳಬೇಕು ಮತ್ತು ಅದೇ ರೀತಿ ಸೌಹಾರ್ದತೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಇತರರಿಗೆ ಪ್ರೇರಣೆ ಯಾಗಬೇಕೆಂದು ಹೇಳಿದರು. ಮುಖ್ಯ ಅಥಿತಿಗಳಾಗಿ ಶಂಶುದ್ದೀನ್ ಅಜ್ಹರಿ ಖತೀಬರು ಆಯಿಷಾ ಜುಮಾ ಮಸ್ಜಿದ್ ಮಾಪತ್ಲಾಲ್ ಸೆಲೀಂ ಕುಂಪನಮಜಲ್ ಅಧ್ಯಕ್ಷರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ತಾಲೂಕು ಸಾದಿಕ್ ಬಿ ಎಚ್ ಬಿ ,ನಾಸಿರ್ ವಿ ಎಚ್ , ಇಕ್ಬಾಲ್ ಎನ್ ಎಂ , ಮುಸ್ತಾಕ್ ಬಿ ಎಂ ಉಪಸ್ಥಿತರಿದ್ದರು.
ಒಟ್ಟು 60 ಯೂನಿಟ್ ರಕ್ತ ಶೇಖರಣೆ ಮಾಡಲಾಗಿದ್ದು, ಕಾರ್ಯಕ್ರಮವನ್ನು ಅಶ್ರಫ್ ತಲಪಾಡಿ ಸ್ವಾಗತಿಸಿ ಹಫೀಜ್ ತಲಪಾಡಿ ವಂದಿಸಿದರು .ಕಾರ್ಯಕ್ರಮದ ನಿರೂಪಣೆಯನ್ನು ಅನ್ವರ್ ಕೆ ಎಚ್ ನಡೆಸಿದರು