ಪೋಪ್ ಫ್ರಾನ್ಸಿಸ್ ನಿಧನ

- Advertisement -

ವ್ಯಾಟಿಕನ್ ಸಿಟಿ: ರೋಮನ್ ಕ್ಯಾಥೋಲಿಕ್‌ ನ ಮೊದಲ ಲ್ಯಾಟಿನ್ ಅಮೆರಿಕನ್ ಮೂಲದ ಪೋಪ್ ಫ್ರಾನ್ಸಿಸ್ ನಿಧನರಾಗಿದ್ದಾರೆ ಎಂದು ವ್ಯಾಟಿಕನ್ ಸಿಟಿ ಸೋಮವಾರ ವಿಡಿಯೊ ಹೇಳಿಕೆಯಲ್ಲಿ ತಿಳಿಸಿದೆ.

- Advertisement -

ಅವರಿಗೆ 88 ವರ್ಷ ವಯಸ್ಸಾಗಿತ್ತು. ಇತ್ತೀಚೆಗೆ ಡಬಲ್ ನ್ಯುಮೋನಿಯಾದ ಗಂಭೀರ ಆರೋಗ್ಯ ಸಮಸ್ಯೆಯಿಂದ ಚೇತರಿಸಿಕೊಂಡಿದ್ದರು.

‘ಆತ್ಮೀಯ ಸಹೋದರ ಸಹೋದರಿಯರೇ, ನಮ್ಮ ಫಾದರ್ ಫ್ರಾನ್ಸಿಸ್ ಅವರು ನಿಧನರಾಗಿರುವುದನ್ನು ನಾನು ಅತೀವ ದುಃಖದಿಂದ ಘೋಷಿಸುತ್ತಿದ್ದೇನೆ ’ ಎಂದು ಕಾರ್ಡಿನಲ್ ಕೆವಿನ್ ಫಾರೆಲ್, ವ್ಯಾಟಿಕನ್‌ನ ಟಿವಿ ಚಾನೆಲ್‌ನಲ್ಲಿ ಘೋಷಿಸಿದ್ದಾರೆ.

- Advertisement -

ಇಂದು ಬೆಳಿಗ್ಗೆ 7.35ಕ್ಕೆ, ರೋಮ್‌ನ ಬಿಷಪ್ ಫ್ರಾನ್ಸಿಸ್ ಅವರು ನಿಧನರಾದರು. ಅವರ ಇಡೀ ಜೀವನವು ಭಗವಂತನ ಸೇವೆ ಮತ್ತು ಚರ್ಚ್‌ಗೆ ಸಮರ್ಪಿತವಾಗಿತ್ತು ಎಂದು ಫಾರೆಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾರ್ಜ್ ಮಾರಿಯೊ ಬರ್ಗೊಗ್ಲಿಯೊ(ಪೋಪ್ ಫ್ರಾನ್ಸಿಸ್) 2013ರ ಮಾರ್ಚ್ 13ರಂದು ಪೋಪ್ ಆಗಿ ಆಯ್ಕೆಯಾಗಿದ್ದರು.

- Advertisement -


Must Read

Related Articles