Home ಟಾಪ್ ಸುದ್ದಿಗಳು ಆದಿತ್ಯನಾಥ್ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿದ್ದ ವಿದ್ಯಾರ್ಥಿನಿಗೆ ಎಸ್ಪಿ ಟಿಕೆಟ್ !

ಆದಿತ್ಯನಾಥ್ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿದ್ದ ವಿದ್ಯಾರ್ಥಿನಿಗೆ ಎಸ್ಪಿ ಟಿಕೆಟ್ !

ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿದ್ದ 25 ವರ್ಷದ ವಿದ್ಯಾರ್ಥಿನಿಯೋರ್ವರಿಗೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಟಿಕೆಟ್ ನೀಡಿದ್ದಾರೆ.

ಉತ್ತರ ಪ್ರದೇಶದ ಲಖನೌ ಉತ್ತರ ವಿಧಾನಸಭಾ ಕ್ಷೇತ್ರದಿಂದ ವಿದ್ಯಾರ್ಥಿನಿ ಪೂಜಾ ಶುಕ್ಲಾಗೆ ಮಣೆ ಹಾಕಿರುವ ಸಮಾಜವಾದಿ ಪಕ್ಷ, 2022ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಟಿಕೆಟ್ ನೀಡಿದೆ.

‘ಹಿಂದಿ ಸ್ವರಾಜ್ ದಿವಸ್’ ಅಂಗವಾಗಿ 2017ರಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಲಖನೌ ವಿಶ್ವವಿದ್ಯಾಲಯಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಸಮಾಜವಾದಿ ಪಕ್ಷದೊಂದಿಗೆ ಇತರೆ ವಿದ್ಯಾರ್ಥಿಗಳ ಗುಂಪು ರಸ್ತೆಯಲ್ಲಿ ಪ್ರತಿಭಟನೆ ನಡೆಸಿತ್ತು. ಇದರಲ್ಲಿ ವಿದ್ಯಾರ್ಥಿನಿ ಪೂಜಾ ಶುಕ್ಲಾ ಸಹ ಸೇರಿಕೊಂಡಿದ್ದರು. ಇದೇ ಕಾರಣಕ್ಕಾಗಿ ಲಖನೌ ವಿಶ್ವವಿದ್ಯಾಲಯದಿಂದ ಅಮಾನತುಗೊಂಡಿದ್ದ 8 ವಿದ್ಯಾರ್ಥಿಗಳ ಪಟ್ಟಿಯಲ್ಲಿ ಪೂಜಾ ಶುಕ್ಲಾ ಕೂಡ ಇದ್ದರು. ಜೊತೆಗೆ 20 ದಿನಗಳ ಕಾಲ ಜೈಲುವಾಸ ಅನುಭವಿಸಿದರು.

Join Whatsapp
Exit mobile version