Home ಕರಾವಳಿ ಮಂಗಳೂರು | ಅಪರಾಧ ಪ್ರಕರಣ ಹೆಚ್ಚಳ: ವಾಹನಗಳ ಟಿಂಟ್ ತೆರವುಗೊಳಿಸುತ್ತಿರುವ ಪೊಲೀಸರು

ಮಂಗಳೂರು | ಅಪರಾಧ ಪ್ರಕರಣ ಹೆಚ್ಚಳ: ವಾಹನಗಳ ಟಿಂಟ್ ತೆರವುಗೊಳಿಸುತ್ತಿರುವ ಪೊಲೀಸರು

ಸುರತ್ಕಲ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ವಾಹನಗಳ ಗಾಜಿನ ಮೇಲೆ ಅಳವಡಿಸಿಕೊಂಡ ಟಿಂಟ್ ಅನ್ನು ತೆರವುಗೊಳಿಸುತ್ತಿದ್ದಾರೆ.


ಸುರತ್ಕಲ್, ಕಾಟಿಪಳ್ಳ, ಕೋಡಿಕೆರೆ ಸೇರಿದಂತೆ ಹಲವೆಡೆ ವಾಹನಗಳಿಗೆ ಟಿಂಟ್ ಗಳನ್ನು ಅಳವಡಿಸಿಕೊಂಡು ಸಂಚರಿಸುವ ಶೋಕಿ ಹೆಚ್ಚಾಗಿದ್ದು, ಅಂಥ ವಾಹನಗಳ ಮೇಲೆ ಪೊಲೀಸರ ಕಣ್ಣು ಇಟ್ಟಿದ್ದಾರೆ.


ಜಿಲ್ಲೆಯಲ್ಲಿ ಮೂವರ ಹತ್ಯೆ ಪ್ರಕರಣ, ಸ್ವಾತಂತ್ರ್ಯ ಹೋರಾಟಗಾರರ ಫ್ಲೆಕ್ಸ್ ವಿಚಾರವಾಗಿ ವಿವಾದ ಎದ್ದಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ವಾಹನಗಳ ತಪಾಸಣೆಯನ್ನು ತೀವ್ರಗೊಳಿಸಿದೆ. ಅಪರಾಧ ತಡೆಗೆ ಮತ್ತೆ ಚೆಕ್ ಪಾಯಿಂಟ್ ನಿರ್ಮಿಸಿ ವಾಹನ ತಪಾಸಣೆ ತೀವ್ರಗೊಳಿಸಿರುವ ಪೊಲೀಸರು ದಂಡ ವಿಧಿಸಿ ಟಿಂಟ್ ತೆಗೆಸುತ್ತಿದ್ದಾರೆ.

Join Whatsapp
Exit mobile version