ನವದೆಹಲಿ: 2002 ರ ಗುಜರಾತ್ ದಂಗೆಯ ಅತ್ಯಂತ ಭಯಾನಕ ಅತ್ಯಾಚಾರ ಪ್ರಕರಣಗಳಲ್ಲಿ ಒಂದರಲ್ಲಿ ಬದುಕುಳಿದಿರುವ ಬಿಲ್ಕಿಸ್ ಬಾನು, 11 ಅತ್ಯಾಚಾರಿಗಳ ಬಿಡುಗಡೆಯು ನ್ಯಾಯದ ಮೇಲಿನ ನಂಬಿಕೆಯನ್ನು “ಅಲುಗಾಡಿಸಿದೆ” . ತನಗೆ ಏನು ಹೇಳಬೇಕೆಂದು ಪದಗಳೇ ತೋಚುತ್ತಿಲ್ಲ, ತಾನು ಇನ್ನೂ ಮರಗಟ್ಟಿದಂತಿದ್ದೇನೆ ಎಂದು ಹೇಳಿದ್ದಾರೆ.
ಎರಡು ದಿನಗಳ ಹಿಂದೆ ಬಿಡುಗಡೆಯಾದ ನಂತರ ಮೊದಲ ಬಾರಿಗೆ ಮೌನ ಮುರಿದ ಬಿಲ್ಕಿಸ್ ಬಾನು, “ಯಾವುದೇ ಮಹಿಳೆಗೆ ನ್ಯಾಯವು ಈ ರೀತಿ ಕೊನೆಗೊಳ್ಳಲು ಹೇಗೆ ಸಾಧ್ಯ? ನಾನು ನಮ್ಮ ದೇಶದ ಅತ್ಯುನ್ನತ ನ್ಯಾಯಾಲಯಗಳನ್ನು ನಂಬಿದ್ದೆ. ನಾನು ವ್ಯವಸ್ಥೆಯನ್ನು ನಂಬಿದೆ, ಮತ್ತು ನನ್ನ ಆಘಾತದೊಂದಿಗೆ ಬದುಕಲು ನಾನು ನಿಧಾನವಾಗಿ ಕಲಿಯುತ್ತಿದ್ದೆ. ನಾನು ಹೋರಾಡುತ್ತಿದ್ದದ್ದು ನನಗಾಗಿ ಮಾತ್ರವಲ್ಲ, ನ್ಯಾಯಾಲಯಗಳಲ್ಲಿ ನ್ಯಾಯಕ್ಕಾಗಿ ಹೋರಾಡುತ್ತಿರುವ ಪ್ರತಿಯೊಬ್ಬ ಮಹಿಳೆಗಾಗಿ ಅಂದುಕೊಂಡಿದ್ದೆ. ಈ ಅಪರಾಧಿಗಳ ಬಿಡುಗಡೆಯು ನನ್ನಿಂದ ನನ್ನ ಶಾಂತಿಯನ್ನು ಕಸಿದುಕೊಂಡಿದೆ ಮತ್ತು ನ್ಯಾಯದ ಮೇಲಿನ ನನ್ನ ನಂಬಿಕೆಯನ್ನು ಅಲುಗಾಡಿಸಿದೆ”ಎಂದು ಹೇಳಿದರು.
ತನ್ನೊಂದಿಗೆ ಯಾವುದೇ ಸಮಾಲೋಚನೆ ನಡೆಸದೆ ಅಪರಾಧಿಗಳನ್ನು ಬಿಡುಗಡೆ ಮಾಡಿದ ಗುಜರಾತ್ ಸರ್ಕಾರದ ಕ್ರಮದ ಬಗ್ಗೆ ಆಘಾತ ವ್ಯಕ್ತಪಡಿಸಿದ ಅವರು “ಇಂತಹ ದೊಡ್ಡ ಮತ್ತು ಅನ್ಯಾಯದ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಯಾರೂ ನನ್ನ ಸುರಕ್ಷತೆ ಮತ್ತು ಯೋಗಕ್ಷೇಮದ ಬಗ್ಗೆ ವಿಚಾರಿಸಲಿಲ್ಲ. ಗುಜರಾತ್ ಸರ್ಕಾರಕ್ಕೆ ನನ್ನ ವಿನಂತಿ ಇಷ್ಟೇ. ಯಾವುದೇ ಭಯ ಇಲ್ಲದೇ, ಶಾಂತಿಯಿಂದ ಬದುಕುವ ನನ್ನ ಹಕ್ಕನ್ನು ಮರಳಿ ಕೊಡಿ’ ” ಎಂದು ಕೇಳಿದರು.
ಅಪರಾಧಿಗಳನ್ನು ಬಿಡುಗಡೆ ಮಾಡಿರುವ ಗುಜರಾತ್ ಸರ್ಕಾರದ ಕ್ರಮದ ಬಗ್ಗೆ 2002ರ ಗುಜರಾತ್ ಕೋಮು ಸಂಘರ್ಷದಲ್ಲಿ (Gujarat Communal Riots) 11 ಜನರಿಂದ ಸಾಮೂಹಿಕ ಅತ್ಯಾಚಾರಕ್ಕೆ (Gang Rape) ಒಳಗಾಗಿ ಬದುಕುಳಿದ ಸಂತ್ರಸ್ತೆ ಬಿಲ್ಕಿಸ್ ಬಾನು (Bilkis Bano) ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಸರ್ಕಾರದ ನಿರ್ಧಾರವು ನ್ಯಾಯಾಂಗ ವ್ಯವಸ್ಥೆಯ ಬಗೆಗಿನ ನನ್ನ ನಂಬಿಕೆಯನ್ನೇ ಅಲುಗಾಡಿಸಿದೆ. ತೀವ್ರ ಮಾನಸಿಕ ಆಘಾತ ಅನುಭವಿಸಿದ್ದೇನೆ, ಮೋಸಹೋದ ಅನುಭವವಾಗುತ್ತಿದೆ. ಏನು ಹೇಳಬೇಕು ಎಂದೇ ತೋಚುತ್ತಿಲ್ಲ, ಪದಗಳು ಸಿಗುತ್ತಿಲ್ಲ ಎಂದು ಬಿಲ್ಕಿಸ್ ಬಾನು ಬೇಸರ ವ್ಯಕ್ತಪಡಿಸಿದ್ದಾರೆ.
https://f05b620cc0709cef332bd0f8397b19c4.safeframe.googlesyndication.com/safeframe/1-0-38/html/container.html ಯಾವುದೇ ಮಹಿಳೆಗೆ ಸಿಕ್ಕಿದ್ದ ನ್ಯಾಯ ಹೀಗೆ ಅಂತ್ಯವಾಗುವುದು ಸಾಧ್ಯವೇ? ನಮ್ಮ ದೇಶದ ಅತ್ಯುನ್ನತ ನ್ಯಾಯಾಲಯಗಳನ್ನು ನಾನು ನಂಬಿದ್ದೆ, ನಮ್ಮ ವ್ಯವಸ್ಥೆಯನ್ನು ನಂಬಿದ್ದೆ, ನನಗೆ ಆಗಿದ್ದ ಆಘಾತದಿಂದ ನಿಧಾನವಾಗಿ ಹೊರಗೆ ಬರುತ್ತಿದ್ದೆ. ನನ್ನ ದುಃಖ, ನನ್ನ ಹೋರಾಟ, ನಾನು ನ್ಯಾಯಾಲಯಗಳಿಗೆ ಅಲೆದದ್ದು ಕೇವಲ ನನಗಾಗಿ ಅಲ್ಲ. ನ್ಯಾಯಾಲಯಗಳಲ್ಲಿ ನ್ಯಾಯ ಸಿಗುತ್ತದೆ ಎಂದು ಹೋರಾಡುತ್ತಿರುವ ಎಲ್ಲ ಮಹಿಳೆಯರ ಪರವಾಗಿ ಹೋರಾಡುತ್ತಿದ್ದೇನೆ ಎಂದುಕೊಂಡಿದ್ದೆ. ಆದರೆ ಈಗ ಏನಾಯಿತು’ ಎಂದು ತಮ್ಮ ಮೇಲೆ ಅತ್ಯಾಚಾರ ಎಸಗಿದವರಿಗೆ ಶಿಕ್ಷೆಯಾಗಬೇಕು ಎಂದು 18 ವರ್ಷಗಳ ಸುದೀರ್ಘ ಹೋರಾಟ ನಡೆಸಿದ ಬಿಲ್ಕಿಸ್ ಬಾನು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ಇಷ್ಟು ದೊಡ್ಡ ಮಟ್ಟದ ಅನ್ಯಾಯದ ನಿರ್ಧಾರ ತೆಗೆದುಕೊಳ್ಳುವ ಮೊದಲು ಯಾರೂ ನನ್ನ ಸುರಕ್ಷೆಯ ಬಗ್ಗೆ ವಿಚಾರಿಸಲಿಲ್ಲ. ಗುಜರಾತ್ ಸರ್ಕಾರಕ್ಕೆ ನನ್ನ ವಿನಂತಿ ಇಷ್ಟೇ. ಯಾವುದೇ ಭಯ ಇಲ್ಲದೇ, ಶಾಂತಿಯಿಂದ ಬದುಕುವ ನನ್ನ ಹಕ್ಕನ್ನು ಮರಳಿ ಕೊಡಿ’ ಎಂದು ಅವರು ಸರ್ಕಾರದ ನಿರ್ಧಾರದ ಬಗ್ಗೆ ಬೇಸರ ಹೊರಹಾಕಿದರು.
ಅತ್ಯಾಚಾರಿಗಳನ್ನು ಬಿಡುಗಡೆ ಮಾಡಿದ ನಂತರ ಬಿಲ್ಕಿಸ್ ಬಾನು ಅವರ ಸುರಕ್ಷೆ ದೊಡ್ಡ ಸವಾಲಾಗುತ್ತದೆ. ಅತ್ಯಾಚಾರಿಗಳು ಜೈಲಿನಲ್ಲಿದ್ದಾಗಲೇ ಬಿಲ್ಕಿಸ್ ಬಾನು ಹಲವು ಬಾರಿ ಮನೆ ಬದಲಿಸಬೇಕಾಯಿತು. ಬಚ್ಚಿಟ್ಟುಕೊಂಡು ಬದುಕಬೇಕಾಯಿತು. ಇದೀಗ ಏಕಾಏಕಿ ಅತ್ಯಾಚಾರಿಗಳನ್ನು ಬಿಡುಗಡೆ ಮಾಡಿರುವುದರಿಂದ ಸುರಕ್ಷೆ ಮತ್ತು ಕಾನೂನು ಹೋರಾಟದ ಮುಂದಿನ ಹೆಜ್ಜೆ ಬಗ್ಗೆ ಯಾವ ಹೆಜ್ಜೆ ಇರಿಸಬೇಕು ಎಂಬ ಗೊಂದಲ ಅವರನ್ನು ಕಾಡುತ್ತಿದೆ.
ಗುಜರಾತ್ ಹಿಂಸಾಚಾರದ ವೇಳೆ ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ನಡೆದು, ಅವರ ಕುಟುಂಬದ 7 ಮಂದಿಯ ಕೊಲೆಯಾಗಿತ್ತು. ಆಗ ಅವರಿಗೆ ಕೇವಲ 21 ವರ್ಷ ವಯಸ್ಸು. ಈ ಅವಧಿಯಲ್ಲಿ ಬಿಲ್ಕಿಸ್ ಬಾನು 5 ತಿಂಗಳ ಗರ್ಭಿಣಿಯಾಗಿದ್ದರು. ಅವರ ಮೂರು ವರ್ಷದ ಮಗಳನ್ನೂ ದುಷ್ಕರ್ಮಿಗಳು ಕೊಂದಿದ್ದರು. ಮುಂಬೈನ ಸಿಬಿಐ ಕೋರ್ಟ್ ಜನವರಿ 21, 2008ರಂದು ಈ ಪ್ರಕರಣಕ್ಕೆ ಸಂಬಂಧಿಸಿದ 11 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ನಂತರದ ದಿನಗಳಲ್ಲಿ ಬಾಂಬೆ ಹೈಕೋರ್ಟ್ ಈ ತೀರ್ಪನ್ನು ಎತ್ತಿಹಿಡಿದಿತ್ತು.
ಭಾರತವು ಸ್ವಾತಂತ್ರ್ಯ ಗಳಿಸಿ 75 ವರ್ಷಗಳಾದ ಹಿನ್ನೆಲೆಯಲ್ಲಿ ಬಿಡುಗಡೆ ಮಾಡುವ ಅಪರಾಧಿಗಳ ಪಟ್ಟಿಯಲ್ಲಿ ಈ ಅಪರಾಧಿಗಳ ಹೆಸರನ್ನೂ ಗುಜರಾತ್ ಸರ್ಕಾರ ಸೇರಿಸಿತ್ತು. ಬಿಜೆಪಿ ನಿರ್ಧಾರ ಸ್ವಾಗತಿಸಿದ್ದ ಹಿಂದುತ್ವಪರ ಸಂಘಟನೆಗಳ ನಾಯಕರು ಸಿಹಿ ಹಂಚಿ, ಹಾರ ಹಾಕಿ ಸ್ವಾಗತಿಸಿದ್ದರು.