Home ಟಾಪ್ ಸುದ್ದಿಗಳು ಸಚಿವ ಝಮೀರ್ ಅಹಮ್ಮದ್ ತಂಗಿದ್ದ ಹೋಟೆಲ್​​ ಮೇಲೆ ಪೊಲೀಸ್ ದಾಳಿ

ಸಚಿವ ಝಮೀರ್ ಅಹಮ್ಮದ್ ತಂಗಿದ್ದ ಹೋಟೆಲ್​​ ಮೇಲೆ ಪೊಲೀಸ್ ದಾಳಿ

ಹೈದರಾಬಾದ್: ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆಯ ಪ್ರಚಾರಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳ ಪರ ಕರ್ನಾಟಕದ ನಾಯಕರು ಸಹ ತೆರಳಿದ್ದಾರೆ.

ಈ ಮಧ್ಯೆ ಸಚಿವ ಝಮೀರ್ ಅಹಮ್ಮದ್ ತಂಗಿದ್ದ ಹೋಟೆಲ್​ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಹೈದರಾಬಾದ್ ನಗರದ ಪಾರ್ಕ್ ಹಯಾತ್ ಹೋಟೆಲ್ ಮೇಲೆ ನಿನ್ನೆ ತಡರಾತ್ರಿ ದಾಳಿಯಾಗಿದೆ.

ಚುನಾವಣೆಗೆ ಅಕ್ರಮ ಹಣ ವರ್ಗಾವಣೆ ಶಂಕೆ ಮೇರೆ ಪೊಲೀಸರು ದಾಳಿ ಮಾಡಿ ಪರಿಶೀಲನೆ ಮಾಡಿದ್ದಾರೆ.

ಈ ಬಗ್ಗೆ ಝಮೀರ್ ಅಹಮ್ಮದ್ ಆಕ್ರೋಶ ವ್ಯಕ್ತಪಡಿಸಿದ್ದು, ನಾನು ಉಳಿದುಕೊಂಡಿರುವ ಹೈದರಾಬಾದ್ ನಗರದ ಪಾರ್ಕ್ ಹಯಾತ್ ಹೋಟೆಲ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಆದ್ರೆ, ಅವರಿಗೆ ಏನು ಸಿಕ್ಕಿಲ್ಲ. ತೆಲಂಗಾಣದಲ್ಲಿಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದ ಹಿನ್ನೆಲೆಯಲ್ಲಿ ಕೇಂದ್ರದಲ್ಲಿ ಬಿಜೆಪಿ ಮತ್ತು ರಾಜ್ಯದ ಬಿಆರ್‌ ಎಸ್ ಸರ್ಕಾರ ಹತಾಶೆಗೊಂಡಿದ್ದು, ಜಂಟಿ ರಾಜಕೀಯ ದಾಳಿ ನಡೆಸಿವೆ. ಇದು ನಮ್ಮನ್ನು ಹೆದರಿಸಿ ಹಿಂದಕ್ಕೆ ಕಳುಹಿಸುವ ತಂತ್ರವಾಗಿದೆ. ಆದರೆ ನಾವು ಇದಕ್ಕೆ ಹೆದರುವುದಿಲ್ಲ ಎಂದು ಬರೆದುಕೊಂಡಿದ್ದಾರೆ.

Join Whatsapp
Exit mobile version