Home ಕರಾವಳಿ ಅರ್ಕುಳ: ಕೊಪ್ಪಳ ಸುನ್ನೀ ಜಾಮಿಯಾ ಮಸ್ಜಿದ್‌‌ನಲ್ಲಿ ಇಂದು ಬೃಹತ್ ಬುರ್ದಾ ಮಜ್ಲಿಸ್

ಅರ್ಕುಳ: ಕೊಪ್ಪಳ ಸುನ್ನೀ ಜಾಮಿಯಾ ಮಸ್ಜಿದ್‌‌ನಲ್ಲಿ ಇಂದು ಬೃಹತ್ ಬುರ್ದಾ ಮಜ್ಲಿಸ್

ಫರಂಗಿಪೇಟೆ: ಇಲ್ಲಿನ ಅರ್ಕುಳ ಬಳಿ ಇರುವ ಕೊಪ್ಪಳ ಸುನ್ನೀ ಜಾಮಿಯಾ ಮಸ್ಜಿದ್ ವಠಾರದಲ್ಲಿ ಇಂದು(ನ.23) ಬೃಹತ್ ಬುರ್ದಾ ಮಜ್ಲಿಸ್ ಕಾರ್ಯಕ್ರಮ ನಡೆಯಲಿದೆ.

ಸುನ್ನೀ ಜಾಮಿಯಾ ಮಸ್ಜಿದ್ ಹಾಗೂ ತ್ವೈಬಾ ಯಂಗ್‌ಮೆನ್ಸ್ ವತಿಯಿಂದ ಸ್ವಲಾತ್ ವಾರ್ಷಿಕ ಹಾಗೂ ಬುರ್ದಾ ಮಜ್ಲಿಸ್ ಕಾರ್ಯಕ್ರಮ ನಡೆಯಲಿದೆ. ಮಗ್ರಿಬ್ ನಮಾಝಿನ ಬಳಿಕ ನಡೆಯಲಿರುವ ಸ್ವಲಾತ್ ವಾರ್ಷಿಕ ಕಾರ್ಯಕ್ರಮಕ್ಕೆ ಸ್ಥಳೀಯ ಖತೀಬರಾದ ಅಬೂಬಕರ್ ಲತ್ವೀಫಿ ಬೇಂಗಿಲ ನೇತೃತ್ವ ವಹಿಸಲಿದ್ದು, ಸಯ್ಯಿದ್ ತ್ವಾಹಾ ತಂಙಳ್ ನೇತೃತ್ವದಲ್ಲಿ ನಡೆಯಲಿರುವ ಬೃಹತ್ ಬುರ್ದಾ ಮಜ್ಲಿಸ್‌ ಕಾರ್ಯಕ್ರಮದಲ್ಲಿ ಶಾಹಿನ್ ಬಾಬು ತಾನೂರು,ಇಂಶಾದ್ ಪರಪ್ಪನಂಗಡಿ, ಶಮೀಮ್ ಕಾಂತಪುರಂ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Join Whatsapp
Exit mobile version