ಮೈಸೂರು: ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪನವರನ್ನು ಕೂಡಲೇ ಬದಲಾಯಿಸಬೇಕು ಬೇಕು ಎಂದು ಸಾಹಿತಿ, ಸಂಘಟಕ ಆರ್ ಜಿ ಹಳ್ಳಿ ನಾಗರಾಜ ಒತ್ತಾಯಿಸಿದರು.
ರಂಗಾಯಣದ ದ್ವಾರದ ಬಳಿ ಕಳೆದ ಒಂಬತ್ತು ದಿನದಿಂದ ರಂಕರ್ಮಿಗಳು, ಸಾಹಿತಿಗಳು, ಸಂಘಟಕರು ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಪೊಲೀಸರ ಭದ್ರ ಕಾವಲು ಅಲ್ಲಿದೆ.
ಅವರಿಗೆಲ್ಲ ಬೆಂಬಲ ಸೂಚಿಸಿ, ಧರಣಿಯಲ್ಲಿ ಭಾಗವಹಿಸಿ ಅವರು ಮಾತಾಡಿ, ರಂಗಾಯಣ ಪರಂಪರೆ ಉಳಿಸಬೇಕು, ರಂಗಾಯಣ ನಿರ್ದೇಶಕ ಕಾರ್ಯಪ್ಪನವರಿಗೆ ಸಂಸ್ಕೃತಿಯೇ ಇಲ್ಲ, ಸಾಹಿತಿ, ಕಲಾವಿದರನ್ನು ಅವಮಾನ ಮಾಡುತ್ತಿದ್ದಾರೆ, ಎಲ್ಲರನ್ನೂ ಮಾವೋವಾದಿಗಳು ಎಂದು ಟೀಕಿಸುತ್ತಾರೆ ಎಂದರು.
ಸೋಮವಾರದ ಧರಣಿಯಲ್ಲಿ ರಂಗಾಯಣದ ಮಾಜಿ ನಿರ್ದೇಶಕರಾದ ಸಿ. ಬಸವಲಿಂಗಯ್ಯ, ಜನ್ನಿ (ಜನಾರ್ದನ), ನಿವೃತ್ತ ಪ್ರಾಧ್ಯಾಪಕರಾದ ಕಾಳಚೆನ್ನೇಗೌಡ, ಡಾ. ಪಂಡಿತಾರಾಧ್ಯ, ಮಾಜಿ ಮೇಯರ್ ಪುರುಷೋತ್ತಮ, ಪತ್ರಕರ್ತ ಗುರುರಾಜ, ಸಂಘಟಕ ಮೋಹನ್ ಕುಮಾರ ಗೌಡ ಹಾಗೂ ಇತರರು ಭಾಗವಹಿಸಿದ್ದರು.