Home ಕರಾವಳಿ ಹಿಂಬದಿ ಸವಾರ ನಿರ್ಬಂಧ ಹಿಂಪಡೆದ ಪೊಲೀಸ್ ಆಯುಕ್ತರು

ಹಿಂಬದಿ ಸವಾರ ನಿರ್ಬಂಧ ಹಿಂಪಡೆದ ಪೊಲೀಸ್ ಆಯುಕ್ತರು

ರಾತ್ರಿ 9 ಗಂಟೆವರೆಗೆ ಅಂಗಡಿ ತೆರೆಯಲು ಅವಕಾಶ


ಮಂಗಳೂರು: ಸುರತ್ಕಲ್ ಫಾಝಿಲ್ ಹತ್ಯೆಯ ಬಳಿಕ ದಕ್ಷಿಣ ಕನ್ನಡ ಜಿಲ್ಲಾದ್ಯಂತ ರಾತ್ರಿ ವೇಳೆ ಹೇರಲಾಗಿರುವ ನಿರ್ಬಂಧವನ್ನು ಸಡಿಲಗೊಳಿಸಲಾಗಿದ್ದು, ರಾತ್ರಿ ವೇಳೆ ದ್ವಿ ಚಕ್ರ ವಾಹನದಲ್ಲಿ ಹಿಂಬದಿ ಸವಾರ ಸಂಚರಿಸಬಾರದು ಎಂಬ ಆದೇಶವನ್ನು ಸಾರ್ವಜನಿಕರ ತೀವ್ರ ಆಕ್ಷೇಪದ ಬಳಿಕ ಹಿಂಪಡೆಯಲಾಗಿದೆ.

ರಾತ್ರಿ ನಿರ್ಬಂಧ ನಾಳೆಯಿಂದ ರಾತ್ರಿ 9ರಿಂದ ಆರಂಭಗೊಳ್ಳಲಿದೆ. ರಾತ್ರಿ 9 ಗಂಟೆವರೆಗೆ ವ್ಯಾಪಾರ-ವಹಿವಾಟು ನಡೆಸಲು ಅವಕಾಶ ಕಲ್ಪಿಸಲಾಗಿದೆ. ಇದು ನಾಳೆಯಿಂದ ಮೂರು ದಿನಗಳವರೆಗೆ ಜಾರಿಯಲ್ಲಿರುತ್ತದೆ.
ನಾಳೆಯಿಂದ ಮದ್ಯದಂಗಡಿ ಸಂಜೆ 6ಗಂಟೆವರೆಗೆ ತೆರೆಯಬಹುದು. ಈ ಹಿಂದಿನಂತೆ 144 ಸೆಕ್ಷನ್ ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.


6 ಗಂಟೆಗೆ ಅಂಗಡಿ ಮುಚ್ಚುವ ನಿರ್ಬಂಧಕ್ಕೆ ವಿನಾಯಿತಿ ನೀಡಲಾಗಿದ್ದು, ನಾಳೆಯಿಂದ ಮೂರು ದಿನಗಳ ಕಾಲ ರಾತ್ರಿ 9 ಗಂಟೆಗೆ ಅಂಗಡಿ ಮುಚ್ಚುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

Join Whatsapp
Exit mobile version