Home ಟಾಪ್ ಸುದ್ದಿಗಳು ಜಮಖಂಡಿಯಲ್ಲಿ ಕ್ಯಾಂಪಸ್ ಫ್ರಂಟ್ ಕಾರ್ಯಕ್ರಮಕ್ಕೆ ಪೊಲೀಸ್ ಅಡ್ಡಿ | ಪೊಲೀಸ್ ನಡೆಯ ವಿರುದ್ಧ ಕಾನೂನು ಹೋರಾಟ:...

ಜಮಖಂಡಿಯಲ್ಲಿ ಕ್ಯಾಂಪಸ್ ಫ್ರಂಟ್ ಕಾರ್ಯಕ್ರಮಕ್ಕೆ ಪೊಲೀಸ್ ಅಡ್ಡಿ | ಪೊಲೀಸ್ ನಡೆಯ ವಿರುದ್ಧ ಕಾನೂನು ಹೋರಾಟ: ಅಥಾವುಲ್ಲಾ

ಬಾಗಲಕೋಟೆ: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ವತಿಯಿಂದ ” ಒಗ್ಗಟ್ಟಿನಲ್ಲಿ ಬಲವರ್ಧನೆ , ಭಿನ್ನ ಧ್ವನಿಯ ರಕ್ಷಣೆ” ಎಂಬ ಘೋಷ ವಾಕ್ಯದಡಿ ರಾಜ್ಯ ಸದಸ್ಯತ್ವ ಅಭಿಯಾನದ ಉದ್ಘಾಟನಾ ಕಾರ್ಯಕ್ರಮವು ಬಾಗಲಕೋಟೆಯ ಜಮಖಂಡಿಯಲ್ಲಿ ನಡೆಯಿತು.


ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಸಾದಿಕ್ ಹಾಗು ಅಲ್ತಾಫ್ ಹೊಸಪೇಟೆ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಹಲವಾರು ವಿದ್ಯಾರ್ಥಿಗಳು ಕ್ಯಾಂಪಸ್ ಫ್ರಂಟ್ ಸದಸ್ಯತ್ವ ಕೂಪನ್ ಪಡೆಯುವ ಮೂಲಕ ಸಂಘಟನೆಗೆ ಸೇರಿದರು. ಆದರೆ ಕಾರ್ಯಕ್ರಮದ ಮಧ್ಯೆ ಸಭಾಂಗಣಕ್ಕೆ ಆಗಮಿಸಿದ ಸ್ಥಳೀಯ ಪೊಲೀಸರು ಕಾರ್ಯಕ್ರಮಕ್ಕೆ ಅಡ್ಡಿ ಪಡಿಸಿ ಕೆಲವು ಕಾರ್ಯಕರ್ತರನ್ನು ಬಂಧಿಸಿದ್ದಾರೆ.


ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಸಿಎಫ್ಐ ರಾಜ್ಯಾಧ್ಯಕ್ಷ ಅಥಾವುಲ್ಲ ಪುಂಜಾಲಕಟ್ಟೆ, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ವತಿಯಿಂದ ರಾಜ್ಯಾದ್ಯಂತ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ಜಮಖಂಡಿಯಲ್ಲಿಯೂ ಮಂಗಳವಾರ ಕಾರ್ಯಕ್ರಮವನ್ನು ಕೋವಿಡ್ ಶಿಷ್ಟಾಚಾರವನ್ನು ಪಾಲಿಸಿ ಹಮ್ಮಿಕೊಳ್ಳಲಾಗಿತ್ತು. ಕಾನೂನು ಬದ್ಧವಾಗಿ ನಡೆಸುತ್ತಿದ್ದ ಕಾರ್ಯಕ್ರಮದ ಮೇಲೆ ಜಮಖಂಡಿ ಪೊಲೀಸರು ಅಕ್ರಮವಾಗಿ ನುಗ್ಗಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿ ಬಂಧಿಸಿದ್ದಾರೆ. ಪೊಲೀಸರ ಈ ನಡೆ ಖಂಡನೀಯ. ಇದರ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Join Whatsapp
Exit mobile version