Home Uncategorized ಪ್ರಧಾನಿ ಪ್ರವಾಸ ಕಸರತ್ತು : ಸ್ಪೀಡ್ ಬ್ರೇಕರ್ಸ್ ಕಿತ್ತುಹಾಕಿ, ಹೆಲಿಪ್ಯಾಡ್ ನಿರ್ಮಿಸಿ ಹೊರಟೋದ ಬಿಬಿಎಂಪಿ |...

ಪ್ರಧಾನಿ ಪ್ರವಾಸ ಕಸರತ್ತು : ಸ್ಪೀಡ್ ಬ್ರೇಕರ್ಸ್ ಕಿತ್ತುಹಾಕಿ, ಹೆಲಿಪ್ಯಾಡ್ ನಿರ್ಮಿಸಿ ಹೊರಟೋದ ಬಿಬಿಎಂಪಿ | ಬೆಂಗಳೂರು ವಿವಿ ವಿದ್ಯಾರ್ಥಿಗಳಿಂದ ಪ್ರತಿಭಟನೆ ಎಚ್ಚರಿಕೆ

ಬೆಂಗಳೂರು: ಮೋದಿ ಪ್ರವಾಸಕ್ಕೆಂದು ಪಾಲಿಕೆ ರಸ್ತೆಗೆ ಡಾಂಬರು ಹಾಕುವ ಭರದಲ್ಲಿ ಪಾಲಿಕೆ ಹಂಪ್ಸ್​ಗಳನ್ನ ಮುಚ್ಚಿಸಿದ್ದು, ಇದರಿಂದ ವಾಹನಗಳು ಭಾರಿ ವೇಗವಾಗಿ ಸಂಚರಿಸುತ್ತಿದೆ ಮತ್ತು ಕಂಟ್ರೋಲ್ ಸಿಗದೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿವೆ. ಈ ಹಿನ್ನೆಲೆ ತೆರವು ಮಾಡಿರುವ ರಸ್ತೆ ಹಂಪ್ಸ್​ಗಳನ್ನ ಪುನರ್ ನಿರ್ಮಿಸಲು ಬೆಂಗಳೂರು ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ಒತ್ತಾಯಿಸಿದ್ದು ಬಿಬಿಎಂಪಿಗೆ ಸೋಮವಾರದವರೆಗೆ ಗಡುವು ನೀಡಿದ್ದಾರೆ.

ವಿವಿ ಆವರಣದಲ್ಲಿ 10 ಸಾವಿರಕ್ಕೂ ಅಧಿಕ ವಾಹನಗಳು ಸಂಚರಿಸುತ್ತವೆ. ಹಂಪ್ಸ್ ಇಲ್ಲದೆ ನಿತ್ಯ 6 ರಿಂದ 8 ಅಪಘಾತಗಳು ಸಂಭವಿಸುತ್ತಿವೆ. ಮೊದಲು ವಿವಿ ಆವರಣದಲ್ಲಿ ಒಟ್ಟು 22 ಹಂಪ್ಸ್​ಗಳಿದ್ದವು. ಬಿಬಿಎಂಪಿ‌ ಕಾಮಗಾರಿ ಸಂದರ್ಭದಲ್ಲಿ ಇದನ್ನು ಕಿತ್ತುಹಾಕಿದ್ದು ಪುನರ್ ನಿರ್ಮಿಸಲು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

ದೈಹಿಕ ಶಿಕ್ಷಣ ವಿದ್ಯಾರ್ಥಿಗಳ ಮೈದಾನದಲ್ಲಿ 3 ಹೆಲಿಪ್ಯಾಡ್ ನಿರ್ಮಿಸಲಾಗಿದೆ. ಪ್ರಧಾನಿ ಇಲ್ಲಿಗೆ ಬಂದಿಳಿಯದಿದ್ದರೂ, ಹೆಲಿಪ್ಯಾಡ್ ಇನ್ನು ತೆರವಾಗಿಲ್ಲ. ಇದರಿಂದ ಆಟದ ಮೈದಾನ ಬಳಸಿಕೊಳ್ಳಲು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ. ಹೀಗಾಗಿ 2 ದಿನಗೊಳಗಾಗಿ ರಸ್ತೆಗೆ ಹಂಪ್ಸ್​ಗಳನ್ನ ಅಳವಡಿಸಬೇಕು ಮತ್ತು ಹೆಲಿಪ್ಯಾಡ್ ತೆರವು ಮಾಡಬೇಕು.
ಸೋಮವಾರದೊಳಗೆ ಸಮಸ್ಯೆ ಬಗೆಹರಿಯದಿದ್ದರೆ ಹೋರಾಟದ ಹಾದಿ ಹಿಡಿಯುತ್ತೇವೆ ಎಂದು ವಿವಿ ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದ್ದಾರೆ.

Join Whatsapp
Exit mobile version