ನವದೆಹಲಿ: ತನ್ನ ಮನೆಯಲ್ಲಿ ಮುಸ್ಲಿಮ್ ಯುವಕ ವಾಸವಿದ್ದರು, ತನ್ನ ತಾಯಿ ಈದ್ ದಿನದಂದು ಅವರಿಗಾಗಿ ವಿಶೇಷ ಅಡುಗೆ ಮಾಡುತ್ತಿದ್ದರು ಎಂದು ಮೋದಿ ತಮ್ಮ ತಾಯಿಯ ನೂರು ವರ್ಷದ ಬ್ಲಾಗ್ ಪೋಸ್ಟ್ ನಲ್ಲಿ ಬಾಲ್ಯದ ಕ್ಷಣಗಳನ್ನು ವಿವರಿಸಿದ್ದಾರೆ.
ನನ್ನ ತಾಯಿ ಇತರರ ಸಂತೋಷದಲ್ಲಿ ತನ್ನ ಸಂತೋಷವನ್ನು ಕಂಡುಕೊಳ್ಳುತ್ತಾರೆ. ನಮ್ಮ ಮನೆ ಚಿಕ್ಕದಾಗಿರಬಹುದು, ಆದರೆ ಅವರು ತುಂಬಾ ವಿಶಾಲ ಹೃದಯದವರಾಗಿದ್ದರು. ನನ್ನ ತಂದೆಯ ಆತ್ಮೀಯ ಸ್ನೇಹಿತನ ಅಕಾಲಿಕ ಮರಣದ ನಂತರ ಅವರ ಮಗ ಅಬ್ಬಾಸ್ ನನ್ನು ಮನಗೆ ಕರೆತಂದರು. ಅಬ್ಬಾಸ್, ನಮ್ಮ ಮನೆಗೆ ಬಂದು, ನಮ್ಮೊಂದಿಗೆ ಉಳಿದುಕೊಂಡು ಆತನ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದರು ಎಂದು ಹೇಳಿದ್ದಾರೆ.
ನನ್ನ ತಾಯಿ ತನ್ನ ಮಕ್ಕಳಷ್ಟೆ ಪ್ರೀತಿ ಮತ್ತು ಕಾಳಜಿಯನ್ನು ಅಬ್ಬಾಸ್ ನ ಬಗ್ಗೆ ಹೊಂದಿದ್ದರು. ಪ್ರತಿ ವರ್ಷ ಈದ್ ನಲ್ಲಿ ಅವರು ಅವರ ನೆಚ್ಚಿನ ಭಕ್ಷ್ಯಗಳನ್ನು ತಯಾರಿಸುತ್ತಿದ್ದರು ಎಂದು ಮೋದಿ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.