Home ಟಾಪ್ ಸುದ್ದಿಗಳು ಗಣಪತಿ ಮೂರ್ತಿಯನ್ನು ಪಡೆಯಲು ನಿರಾಕರಿಸಿದ ಪ್ರಧಾನಿ: ಮೋದಿಗೆ ಧರ್ಮ, ದೇವರು ಎಂದರೆ ಭಕ್ತಿಯಲ್ಲ ಎಂದ ಕಾಂಗ್ರೆಸ್

ಗಣಪತಿ ಮೂರ್ತಿಯನ್ನು ಪಡೆಯಲು ನಿರಾಕರಿಸಿದ ಪ್ರಧಾನಿ: ಮೋದಿಗೆ ಧರ್ಮ, ದೇವರು ಎಂದರೆ ಭಕ್ತಿಯಲ್ಲ ಎಂದ ಕಾಂಗ್ರೆಸ್

ಬೆಂಗಳೂರು: ವಿಧಾನ ಸಭೆ ಚುನಾವಣೆ ಹಿನ್ನೆಲೆ ಪ್ರಚಾರದಲ್ಲಿರುವ ಪ್ರಧಾನಿ ಮೋದಿಯವರು ಆನೆಗುಡ್ಡೆ ಗಣಪತಿ ಮೂರ್ತಿಯನ್ನು ಪಡೆಯಲು ನಿರಾಕರಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲದಲ್ಲಿ ನಡೆದಿದೆ.


ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಮೋದಿಗೆ ಧರ್ಮ, ದೇವರು ಎಂದರೆ ಭಕ್ತಿಯಲ್ಲ, ಪ್ರಚಾರಕ್ಕೆ ಬಳಸುವ ಕುಯುಕ್ತಿ ಅಷ್ಟೇ ಎಂದು ಕುಟುಕಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಮೋದಿಗೆ ಧರ್ಮ, ದೇವರು ಎಂದರೆ ಭಕ್ತಿಯಲ್ಲ, ಪ್ರಚಾರಕ್ಕೆ ಬಳಸುವ ಕುಯುಕ್ತಿ ಅಷ್ಟೇ! ಕರ್ನಾಟಕದ ಪ್ರಮುಖ ಆರಾಧ್ಯ ದೈವ ಆನೆಗುಡ್ಡೆ ಗಣಪತಿ ಮೂರ್ತಿಯನ್ನು ಪಡೆಯಲು ನಿರಾಕರಿಸಿದ ಮೋದಿ ಕರ್ನಾಟಕದ ದೇವರುಗಳನ್ನು ಹಾಗೂ ಕರ್ನಾಟಕವನ್ನು ಅವಮಾನಿಸಿದ್ದಾರೆ. ಮೋದಿಯವರು ಗಣಪತಿ ಮೂರ್ತಿ ಕಂಡೊಡನೆ ಅಸಹನೆ ವ್ಯಕ್ತಪಡಿಸಿ ಪಕ್ಕಕ್ಕೆ ಇಡುವಂತೆ ಸೂಚಿಸಿ ದೇವರ ಮುಂದೆಯೇ ದರ್ಪ ಮೆರೆದಿದ್ದಾರೆ ಎಂದು ಹೇಳಿದೆ.

Join Whatsapp
Exit mobile version