Home ಟಾಪ್ ಸುದ್ದಿಗಳು ಪ್ರಧಾನಿ ಮೋದಿಯ ಹೆಲಿಕಾಪ್ಟರ್ ಬಳಿ ಕಪ್ಪು ಬಲೂನುಗಳು ಹಾರಾಟ !

ಪ್ರಧಾನಿ ಮೋದಿಯ ಹೆಲಿಕಾಪ್ಟರ್ ಬಳಿ ಕಪ್ಪು ಬಲೂನುಗಳು ಹಾರಾಟ !

ಹೊಸದಿಲ್ಲಿ: ಪ್ರತಿಭಟನಕಾರರು ಹಾರಿಸಿದ ಕಪ್ಪು ಬಲೂನ್ ಗಳು ಪ್ರಧಾನಿ ನರೇಂದ್ರ ಮೋದಿ ಅವರು ಸಂಚರಿಸುತ್ತಿದ್ದ ಹೆಲಿಕಾಪ್ಟರ್ ಸಮೀಪವೇ ಹಾದುಹೋಗಿದೆ.

ಆಂಧ್ರಪ್ರದೇಶದಲ್ಲಿ ಇಂದು ಮೋದಿ ಅವರ ಹೆಲಿಕಾಪ್ಟರ್ ಸಮೀಪವೇ ಕಪ್ಪು ಬಲೂನ್ ಗಳನ್ನು ಹಾರಾಟವಾಗಿದ್ದು, ಭದ್ರತಾ ವೈಫಲ್ಯ ಎಂದು ಕಾರ್ಯಕರ್ತರು ದೂರಿದ್ದಾರೆ.

ಮೋದಿಯವರ ಹೆಲಿಕಾಪ್ಟರ್ ಟೇಕ್ ಆಫ್ ಆಗುತ್ತಿರುವಾಗ ಬಲೂನ್ ಗಳು ಹಾರುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮೋದಿಯವರ ಭೇಟಿ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಈ ಬಲೂನ್ ಹಾರಿಸಿದ್ದರು.

Join Whatsapp
Exit mobile version