Home ಟಾಪ್ ಸುದ್ದಿಗಳು ಒಮರ್ ಅಬ್ದುಲ್ಲಾಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ

ಒಮರ್ ಅಬ್ದುಲ್ಲಾಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ

ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಕ್ಕಾಗಿ ಪಕ್ಷವನ್ನು ಅಭಿನಂದಿಸಿದ್ದಕ್ಕಾಗಿ ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.


ಪ್ರಧಾನಿ ಮೋದಿ X ಪೋಸ್ಟ್ ನಲ್ಲಿ ”ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ನಿಮ್ಮ ಶ್ಲಾಘನೀಯ ಗೆಲುವಿಗಾಗಿ ನಾನು ನ್ಯಾಷನಲ್ ಕಾನ್ಫರೆನ್ಸ್ ಪಕ್ಷವನ್ನು ಅಭಿನಂದಿಸಲು ಬಯಸುತ್ತೇನೆ” ಎಂದು ಬರೆದು ಅಭಿನಂದನೆ ಸಲ್ಲಿಸಿದ್ದಾರೆ.

ಓಮರ್ ಅಬ್ದುಲ್ಲಾ ಅವರು X ಪೋಸ್ಟ್ ನಲ್ಲಿ “ನಿಮ್ಮ ಅಭಿನಂದನೆಗಳ ಸಂದೇಶಕ್ಕಾಗಿ ತುಂಬಾ ಧನ್ಯವಾದಗಳು ನರೇಂದ್ರಮೋದಿ ಸಾಹೇಬ್. ನಾವು ಫೆಡರಲಿಸಂನ ನಿಜವಾದ ಸ್ಪೂರ್ತಿಯಲ್ಲಿ ರಚನಾತ್ಮಕ ಸಂಬಂಧವನ್ನು ಎದುರು ನೋಡುತ್ತಿದ್ದೇವೆ ಇದರಿಂದ ಜೆ & ಕೆ ಜನರು ಮುಂದುವರಿದ ಅಭಿವೃದ್ಧಿ ಮತ್ತು ಉತ್ತಮ ಆಡಳಿತದಿಂದ ಪ್ರಯೋಜನ ಪಡೆಯುತ್ತಾರೆ” ಎಂದು ಪ್ರತಿಕಿರಿಯಿಸಿದ್ದಾರೆ.
ಒಮರ್ ಅಬ್ದುಲ್ಲಾ ಅವರು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವುದು ಬಹುತೇಕ ಅಂತಿಮವಾಗಿದೆ.


“ಕೇಂದ್ರಾಡಳಿತ ಪ್ರದೇಶವಾಗಿ ಬಹಳಷ್ಟು ಕೆಲಸಗಳನ್ನು ಮಾಡಬಹುದು, ಸ್ಪಷ್ಟವಾಗಿ ಕೆಲವು ವಿಷಯಗಳು ಸಾಧ್ಯವಿಲ್ಲ ಆದರೆ ಜಮ್ಮು ಮತ್ತು ಕಾಶ್ಮೀರ ಶಾಶ್ವತವಾಗಿ ಕೇಂದ್ರಾಡಳಿತ ಪ್ರದೇಶವಾಗಿ ಆಗಿ ಉಳಿಯುವುದಿಲ್ಲ ಎಂದು ನಾವು ನಿರೀಕ್ಷಿಸುತ್ತೇವೆ. ಗೌರವಾನ್ವಿತ ಪ್ರಧಾನಿಯವರು ಗೌರವಾನ್ವಿತ ಕೆಲಸವನ್ನು ಮಾಡುತ್ತಾರೆ ಮತ್ತು ನಮಗೆ ರಾಜ್ಯ ಸ್ಥಾನಮಾನವನ್ನು ಶೀಘ್ರದಲ್ಲಿ ಹಿಂದಿರುಗಿಸುತ್ತಾರೆ. ನಮ್ಮ ಪ್ರಣಾಳಿಕೆಯ ಉಳಿದ ಭಾಗವನ್ನು ಕಾರ್ಯಗತಗೊಳಿಸುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ”ಎಂದು ಪಿಟಿಐಗೆ ಒಮರ್ ಅಬ್ದುಲ್ಲಾ ಹೇಳಿಕೆ ನೀಡಿದ್ದಾರೆ.

“ಪ್ರಧಾನಿ, ಗೃಹ ಸಚಿವರು, ಎಲ್ಲರೂ ಗೌರವಾನ್ವಿತರು. ಸಂಸತ್ತಿನಲ್ಲಿ ತಮ್ಮ ಭಾಷಣಗಳು ಮತ್ತು ಮಧ್ಯಸ್ಥಿಕೆಗಳಲ್ಲಿ, ಸುಪ್ರೀಂ ಕೋರ್ಟ್ ನಲ್ಲಿ ತಮ್ಮ ಪ್ರತಿನಿಧಿಯ ಮೂಲಕ, ಅವರು ರಾಜ್ಯತ್ವವನ್ನು ಮರುಸ್ಥಾಪಿಸುವುದಾಗಿ ಭರವಸೆ ನೀಡಿದ್ದಾರೆ. ಹಾಗಾಗಿ ಇದು ಆದಷ್ಟು ಬೇಗ ಆಗಬೇಕು ಎಂದು ನಾನು ನಂಬುತ್ತೇನೆ. ತದನಂತರ ನಿಸ್ಸಂಶಯವಾಗಿ ನಮ್ಮ ಆದ್ಯತೆಗಳು ಅಲ್ಲಿಂದ ಮುಂದೆ ಸಾಗುತ್ತವೆ” ಎಂದು ಒಮರ್ ಪ್ರತಿಕ್ರಿಯಿಸಿದ್ದಾರೆ.


“ಹೊಸ ಸರಕಾರ ಅಸ್ತಿತ್ವಕ್ಕೆ ಬಂದ ನಂತರ, ರಾಜ್ಯದ ಮುಖ್ಯಮಂತ್ರಿ ಯಾರೇ ಆಗಿರಲಿ, ಅವರು ದೆಹಲಿಗೆ ತೆರಳಿ ಪ್ರಧಾನಿ, ಗೃಹ ಸಚಿವರು ಮತ್ತು ಇತರ ನಾಯಕರನ್ನು ಭೇಟಿಯಾಗಲು ಜನರ ಜನಾದೇಶವನ್ನು ಮನವರಿಕೆ ಮಾಡುತ್ತಾರೆ ಎಂದು ನಾನು ನಿರೀಕ್ಷಿಸುತ್ತೇನೆ. ರಾಜ್ಯತ್ವವನ್ನು ಮರುಸ್ಥಾಪಿಸುವುದು, ಅಭಿವೃದ್ಧಿ ಮತ್ತು ಶಾಂತಿಗಾಗಿ ಮತ್ತು ಯಾರೇ ಮುಖ್ಯಮಂತ್ರಿಯಾಗಿದ್ದರೂ, ಅವರು ಕೇಂದ್ರ ಸರಕಾರದ ಜತೆ ಯೋಗ್ಯವಾದ ಕೆಲಸದ ಸಂಬಂಧವನ್ನು ಸ್ಥಾಪಿಸಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದರು.


“ಜಮ್ಮು ಮತ್ತು ಕಾಶ್ಮೀರ ಹೊಂದಿರುವ ಹಲವಾರು ಸಮಸ್ಯೆಗಳಿವೆ ಮತ್ತು ಅದು ಕೇಂದ್ರ ಸರಕಾರದೊಂದಿಗೆ ವಿರೋಧಾತ್ಮಕ ಸಂಬಂಧವನ್ನು ಹೊಂದಲು ಸಾಧ್ಯವಿಲ್ಲ. ನಾವು ಒಟ್ಟಾಗಿ ಕೆಲಸ ಮಾಡುವ ಮಾರ್ಗವನ್ನು ಕಂಡುಕೊಳ್ಳಬೇಕಾಗಿದೆ ಮತ್ತು ಕೇಂದ್ರ ಸರಕಾರವು ಜನರ ಆದೇಶವನ್ನು ಗೌರವಿಸುತ್ತದೆ ಮತ್ತು ಜನರ ಸಮಸ್ಯೆಗಳನ್ನು ಪರಿಹರಿಸಲು ಇಲ್ಲಿನ ಸರಕಾರದೊಂದಿಗೆ ಜತೆಯಾಗಿ ಕೆಲಸ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ಒಮರ್ ಅಬ್ದುಲ್ಲಾ ಹೇಳಿಕೆ ನೀಡಿದ್ದಾರೆ.

ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಕ್ಕಾಗಿ ನ್ಯಾಷನಲ್ ಕಾನ್ಫರೆನ್ಸ್ ಅನ್ನು ಅಭಿನಂದಿಸಿ ಪ್ರಧಾನಿ ನರೇಂದ್ರ ಮೋದಿ ಅವರು X ನಲ್ಲಿ ಪೋಸ್ಟ್ ಮಾಡಿದ ಅಭಿನಂದನಾ ಸಂದೇಶಕ್ಕೆ ಒಮರ್ ಅಬ್ದುಲ್ಲಾ ಉತ್ತರಿಸಿದ್ದಾರೆ.

Join Whatsapp
Exit mobile version