ಚಂಡೀಗಢ: ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸರಳ ಬಹುಮತ ಗಳಿಸಿರಬಹುದು. ಆದರೆ ಮತ ಪ್ರಮಾಣದಲ್ಲಿ ಕಾಂಗ್ರೆಸ್ ನಿಕಟ ಪೈಪೋಟಿ ಒಡ್ಡಿರುವುದು ಕಂಡುಬಂದಿದೆ.
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಶೇ 39.94 ಮತ್ತು ಕಾಂಗ್ರೆಸ್ ಶೇ 39.09ರಷ್ಟು ಮತ ಗಳಿಸಿದೆ.
ಚುನಾವಣಾ ಫಲಿತಾಂಶಗಳ ಪ್ರಕಾರ ಎರಡೂ ಪಕ್ಷಗಳು ಕಳೆದ ಬಾರಿಗಿಂತ ಹೆಚ್ಚಿನ ಮತಗಳನ್ನು ಗಿಟ್ಟಿಸಿವೆ. ಕಳೆದ ಬಾರಿಗಿಂತ ಕಾಂಗ್ರೆಸ್ ಶೇ 11 ಮತ್ತು ಬಿಜೆಪಿ ಶೇ 3ರಷ್ಟು ಮತಗಳ ಗಮನಾರ್ಹ ಏರಿಕೆ ಕಂಡಿವೆ.
90 ಸದಸ್ಯ ಬಲದ ಹರಿಯಾಣ ವಿಧಾನಸಭೆಯಲ್ಲಿ ಈ ಬಾರಿ ಸರಳ ಬಹುಮತ ಗಳಿಸಿರುವ ಬಿಜೆಪಿ (48) ಸರ್ಕಾರ ರಚನೆಯತ್ತ ದಾಪುಗಾಲು ಇಟ್ಟಿದೆ. ಕಾಂಗ್ರೆಸ್ 37 ಸ್ಥಾನಗಳನ್ನು ಪಡೆದಿವೆ.