Home ಟಾಪ್ ಸುದ್ದಿಗಳು ಪ್ರಧಾನಿ ಮೋದಿ ಒಬ್ಬ ‘ಹೇಡಿ’; ಭಾರತದ ಭೂ ಪ್ರದೇಶ ಚೀನಾಕ್ಕೆ ಬಿಟ್ಟುಕೊಟ್ಟಿದ್ದಾರೆ : ರಾಹುಲ್ ಗಾಂಧಿ

ಪ್ರಧಾನಿ ಮೋದಿ ಒಬ್ಬ ‘ಹೇಡಿ’; ಭಾರತದ ಭೂ ಪ್ರದೇಶ ಚೀನಾಕ್ಕೆ ಬಿಟ್ಟುಕೊಟ್ಟಿದ್ದಾರೆ : ರಾಹುಲ್ ಗಾಂಧಿ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಚೀನಾದ ಮುಂದೆ ನಿಲ್ಲಲಾಗದ ಒಬ್ಬ ‘ಹೇಡಿ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. ನಮ್ಮ ಭೂ ಪ್ರದೇಶವನ್ನು ಚೀನಾಕ್ಕೆ ಅವರು ಯಾಕೆ ಬಿಟ್ಟುಕೊಟ್ಟಿದ್ದಾರೆ ಎಂದು ಅವರು ಪ್ರಶ್ನಿಸಿದ್ದಾರೆ.

ದೇಶದ ಭೂಭಾಗವನ್ನು ಕಾಪಾಡೋದು ಪ್ರಧಾನಿಯ ಜವಾಬ್ದಾರಿ. ಆದರೆ, ಪ್ರಧಾನಿ ಮೋದಿ ದೇಶದ ಭೂಮಿಯನ್ನು ಚೀನಾಕ್ಕೆ ನೀಡಿದ್ದಾರೆ. ಈ ಬಗ್ಗೆ ಅವರು ದೇಶಕ್ಕೆ ಉತ್ತರಿಸಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ರಕ್ಷಣಾ ಸಚಿವ ರಾಜನಾಥ ಸಿಂಗ್ ಚೀನಾ ಮತ್ತು ಭಾರತದ ಮಿಲಿಟರಿ ಒಪ್ಪಂದದ ಬಗ್ಗೆ ವಿಸ್ತೃತ ವಿವರಣೆ ನೀಡಿದ ಬೆನ್ನಲ್ಲೇ ರಾಹುಲ್ ಗಾಂಧಿ ಈ ಆರೋಪ ಮಾಡಿದ್ದಾರೆ.

ನಮ್ಮ ಸೈನ್ಯವನ್ನು ಈಗ ಫಿಂಗರ್ ಪಾಯಿಂಟ್ ಮೂರರಲ್ಲಿ ಇರಿಸಲಾಗಿದೆ. ಫಿಂಗರ್ ಪಾಯಿಂಟ್ 4 ಕೂಡ ಭಾರತಕ್ಕೆ ಸೇರಿದ ಪ್ರದೇಶವಾಗಿದೆ. ಆದರೆ, ಫಿಂಗರ್ 4ರಿಂದ ಫಿಂಗರ್ 3ಕ್ಕೆ ನಮ್ಮ ಸೈನ್ಯವನ್ನು ಕರೆಸಿಕೊಳ್ಳುವ ಮೂಲಕ, ನಮ್ಮ ದೇಶದ ಪ್ರದೇಶವನ್ನು ಚೀನಾಕ್ಕೆ ಪ್ರಧಾನಿ ಮೋದಿ ಬಿಟ್ಟುಕೊಟ್ಟಿದ್ದಾರೆ ಎಂದು ರಾಹುಲ್ ಗಾಂಧಿ ಆಪಾದಿಸಿದ್ದಾರೆ.  

Join Whatsapp
Exit mobile version