ನವದೆಹಲಿ: ಪ್ರವಾದಿ ಮುಹಮ್ಮದ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಮತ್ತು ಮುಸ್ಲಿಮ್ ಸಮುದಾಯದ ಭಾವನೆಗಳನ್ನು ಘಾಸಿಗೊಳಿಸಿರುವ ನೂಪುರ್ ಶರ್ಮಾ ಅವರನ್ನು ಬಂಧಿಸಲು ಅಧಿಕಾರಿಗಳಿಗೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನು ಹಿಂಪಡೆಯುವಂತೆ ಸುಪ್ರೀಮ್ ಕೋರ್ಟ್ ಅರ್ಜಿದಾರರಿಗೆ ಸೂಚಿಸಿದೆ.
ನೂಪುರ್ ಶರ್ಮಾ ಅವರನ್ನು ಬಂಧಿಸುವಂತೆ ನಿರ್ದೇಶನ ನೀಡುವ ವಿಚಾರದಲ್ಲಿ ನ್ಯಾಯಾಲಯ ಸೂಕ್ಷ್ಮವಾಗಿರಬೇಕು. ಈ ನಿಟ್ಟಿನಲ್ಲಿ ಅರ್ಜಿಯನ್ನು ಹಿಂಪಡೆಯಲು ನನ್ನ ಸೂಕ್ತ ಸಲಹೆ ಎಂದು ಸಿಜೆಐ ಯು ಯು ಲಲಿತ್ ಅವರು ಅರ್ಜಿದಾರರ ಪರ ವಕೀಲರಿಗೆ ತಿಳಿಸಿದ್ದಾರೆ.
ಕಳೆದ ಮಾರ್ಚ್ 26ರಂದು ಸುದ್ದಿವಾಹಿನಿಯೊಂದರಲ್ಲಿ ನೂಪುರ್ ಶರ್ಮಾ ಅವರು ಪ್ರವಾದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದು, ಇದು ದೇಶದಾದ್ಯಂತ ಭಾರಿ ವಿವಾದ ಮತ್ತು ಹಿಂಸಾಚಾರವನ್ನು ಉಂಟು ಮಾಡಿತ್ತು. ಈ ಮಧ್ಯೆ ನೂಪುರ್ ಅವರ ಹೇಳಿಕೆಯನ್ನು ಖಂಡಿಸಿ ಹಲವಾರು ಮುಸ್ಲಿಮ್ ರಾಷ್ಟ್ರಗಳು ಭಾರತದ ಉತ್ಪನ್ನಗಳ ಮೇಲೆ ನಿರ್ಬಂಧ ಹೇರಿತ್ತು. ಇದರಿಂದ ಮುಖಭಂಗಕ್ಕೊಳಗಾದ ಬಿಜೆಪಿ ನೂಪುರ್ ಶರ್ಮಾ ಅವರ ಹೇಳಿಕೆಯಿಂದ ಅಂತರ ಕಾಪಾಡಿಕೊಂಡಿದ್ದು, ಪಕ್ಷದಿಂದ ಅವರನ್ನು ಅಮಾನತುಗೊಳಿಸಿತ್ತು.
ನೂಪುರ್ ಶರ್ಮಾ ಅವರ ದೇಶದ ಹತ್ತಾರು ಕಡೆ ಪ್ರಕರಣ ದಾಖಲಾಗಿದ್ದರೂ ಕೂಡ ಇದುವರೆಗೂ ಅವರನ್ನು ಬಂಧಿಸಲಾಗಿಲ್ಲ. ನ್ಯಾಯಾಂಗವೂ ಅವಳಿಗೆ ಬೆಂಬಲವಾಗಿ ನಿಂತಂತಾಗಿದೆ