Home ಟಾಪ್ ಸುದ್ದಿಗಳು ಶಬರಿಮಲೆಯಲ್ಲಿ ‘ಹಲಾಲ್ ಬೆಲ್ಲ’ ವಿರುದ್ದ ಹೈಕೋರ್ಟ್ ಗೆ ಅರ್ಜಿ

ಶಬರಿಮಲೆಯಲ್ಲಿ ‘ಹಲಾಲ್ ಬೆಲ್ಲ’ ವಿರುದ್ದ ಹೈಕೋರ್ಟ್ ಗೆ ಅರ್ಜಿ

ಕೇರಳ: ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಪ್ರಸಾದವನ್ನು ತಯಾರಿಸುವಾಗ ‘ಹಲಾಲ್ ಬೆಲ್ಲ’ ಬಳಸಿರುವುದರ ವಿರುದ್ದ ದೇವಸ್ಥಾನದ ಮುಖ್ಯಅರ್ಚಕರು ಸ್ಪಷ್ಟನೆ ನೀಡುವಂತೆ ಕೋರಿ ಕೇರಳ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

ಶಬರಿಮಲೆ ಕರ್ಮ ಸಮಿತಿಯ ಪ್ರಧಾನ ಸಂಚಾಲಕ ಎಸ್‌.ಜೆ.ಆರ್. ಕುಮಾರ್ ಸಲ್ಲಿಸಿರುವ ಅರ್ಜಿಯು ಕುರಿತು ಆಹಾರ ಸುರಕ್ಷತಾ ಪ್ರಾಧಿಕಾರದಿಂದ ಹೈಕೋರ್ಟ್ ವರದಿ ಕೇಳಿದೆ.

ದೇವಸ್ಥಾನವು ಸ್ವೀಕರಿಸಿದ ಬೆಲ್ಲದ ಪ್ಯಾಕೇಜ್ ಮೇಲೆ ‘ಹಲಾಲ್’ ಎಂದು ನಮೂದಿಸಲಾಗಿದ್ದು. ಅರಬ್ ದೇಶಗಳಿಗೂ ಈ ಬೆಲ್ಲಗಳನ್ನು ರಫ್ತು ಮಾಡಲಾಗುತ್ತದೆ. ಈ ಹಿಂದೆ ಖರೀದಿಸಿದ್ದ ಬೆಲ್ಲಕ್ಕೆ ಹುಳ ಬಿದ್ದಿದ್ದ ಕಾರಣಕ್ಕೆ ಹೊಸ ಬೆಲ್ಲವನ್ನು ಖರೀದಿಸಲಾಗಿದೆ’ ಎಂದು ಶಬರಿಮಲೆ ಅಯ್ಯಪ್ಪ ದೇವಸ್ಥಾನವನ್ನು ನಿರ್ವಹಿಸುವ ತಿರುವಾಂಕೂರು ದೇವಸ್ವಂ ಮಂಡಳಿಯು ನ್ಯಾಯಾಲಯಕ್ಕೆ ತಿಳಿಸಿದೆ. ಮುಂದಿನ ಪ್ರಕರಣದ ವಿಚಾರಣೆಯು ಆಹಾರ ಸುರಕ್ಷತಾ ಪ್ರಾಧಿಕಾರದ ವರದಿಯ ಬಳಿ ನಡೆಯಲಿದೆ ಎಂದು ಕೋರ್ಟ್ ತಿಳಿಸಿದೆ.

Join Whatsapp
Exit mobile version