Home ಟಾಪ್ ಸುದ್ದಿಗಳು ರೈಲು ಪರಿಚಾರಕರಿಗೆ ಕಾವಿ ಸಮವಸ್ತ್ರ| ಸಂತರ ಆಕ್ಷೇಪದ ಬೆನ್ನಲ್ಲೇ ನಿರ್ಧಾರ ವಾಪಸ್

ರೈಲು ಪರಿಚಾರಕರಿಗೆ ಕಾವಿ ಸಮವಸ್ತ್ರ| ಸಂತರ ಆಕ್ಷೇಪದ ಬೆನ್ನಲ್ಲೇ ನಿರ್ಧಾರ ವಾಪಸ್

ಉಜ್ಜಯಿನಿ: ರೈಲು ಪರಿಚಾರಕರಿಗೆ ಕಾವಿ ಸಮವಸ್ತ್ರ ಜಾರಿಗೆ ತಂದ ಹಿನ್ನೆಲೆಯಲ್ಲಿ ಉಜ್ಜಯಿನಿಯ ಸಂತರು ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ರೈಲ್ವೇ ಇಲಾಖೆಯು ತನ್ನ ನಿರ್ಧಾರವನ್ನು ವಾಪಸ್ ಪಡೆದಿದೆ.

‘ರಾಮಾಯಣ ಎಕ್ಸ್‌’ಪ್ರೆಸ್‌’ ಎಂಬ ರೈಲಿನ ಪರಿಚಾರಕರ ಕಾವಿ ಬಣ್ಣದ ಸಮವಸ್ತ್ರಕ್ಕೆ ಸಂತರು ಆಕ್ಷೇಪ ವ್ಯಕ್ತಪಡಿಸಿದ್ದು, ಇದರ ಬೆನ್ನಲ್ಲೇ ಇಲಾಖೆಯು ಆ ನಿರ್ಧಾರವನ್ನು ವಾಪಸ್ ಪಡೆದಿದೆ.

ರೈಲು ಪರಿಚಾರಕರು ಕಾವಿ ಸಮವಸ್ತ್ರ ಧರಿಸುವಂತೆ ಮಾಡುವ ಮೂಲಕ ಹಿಂದೂ ಧರ್ಮಕ್ಕೆ ಅವಹೇಳನ ಮಾಡಲಾಗಿದೆ ಎಂದು ಸಂತರು ಆರೋಪಿಸಿದ್ದರು. ಅಲ್ಲದೆ, ಸಮವಸ್ತ್ರವನ್ನು ಹಿಂಪಡೆಯದಿದ್ದರೆ ಡಿಸೆಂಬರ್ 12ರಂದು ದೆಹಲಿಯಲ್ಲಿ ರೈಲು ತಡೆ ನಡೆಸಲಾಗುವುದು ಎಂದೂ ಎಚ್ಚರಿಕೆ ನೀಡಿದ್ದರು.

‘ರಾಮಾಯಣ ಎಕ್ಸ್‌’ಪ್ರೆಸ್‌ ನಲ್ಲಿ ಪರಿಚಾರಕರು ಕಾವಿ ಸಮವಸ್ತ್ರ ಧರಿಸಿರುವ ಬಗ್ಗೆ ಎರಡು ದಿನಗಳ ಹಿಂದೆ ರೈಲ್ವೆ ಸಚಿವರಿಗೆ ಪತ್ರ ಬರೆದು ನಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದೆವು. ಸಾಧುಗಳು ಧರಿಸುವಂತಹ ಕಾವಿ ಬಣ್ಣದ ಬಟ್ಟೆ ಹಾಗೂ ರುದ್ರಾಕ್ಷಿ ಮಾಲೆಯನ್ನು ರೈಲಿನ ಪರಿಚಾರಕರು ಧರಿಸುವುದು ಸಾಧುಗಳಿಗೆ ಮತ್ತು ಹಿಂದೂ ಧರ್ಮಕ್ಕೆ ಅವಮಾನ ಮಾಡಿದಂತೆ’ ಎಂದು ಉಜ್ಜಯಿನಿಯ ಅಖಾಡ ಪರಿಷತ್ನ ಮಾಜಿ ಪ್ರಧಾನ ಕಾರ್ಯದರ್ಶಿ ಅವದೇಶ್ಪುರಿ ಹೇಳಿದ್ದಾರೆ.

Join Whatsapp
Exit mobile version