ಎರ್ನಾಕುಲಂ: ಮುಸ್ಲಿಂ ಗಂಡು ಮಕ್ಕಳ ಮುಂಜಿ ಮಾಡಿಸುವ ಸಂಪ್ರದಾಯವು ಕ್ರೂರ, ಅಮಾನವೀಯವಾಗಿದ್ದು, ಈ ಸಂಪ್ರದಾಯದಲ್ಲಿ ಮಧ್ಯಪ್ರವೇಶಿಸುವಂತೆ ಕೋರಿ ಕೇರಳ
ಹೈಕೋರ್ಟ್‌ನಲ್ಲಿ ಧಾರ್ಮಿಕೇತರ ಸಂಘಟನೆಯೊಂದು ಅರ್ಜಿ ಸಲ್ಲಿಸಿರುವುದಾಗಿ ವರದಿಯಾಗಿದೆ.
ಮಕ್ಕಳ ಮೇಲೆ ಬಲವಂತವಾಗಿ ಮಾಡಲಾಗುವ ಮುಂಜಿ ಕಾರ್ಯವು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
‘ಕ್ರೂರ, ಅಮಾನವೀಯ ಮತ್ತು
ಅನಾಗರಿಕ’ ಸಂಪ್ರದಾಯವಾದ ಈ ಕಾರ್ಯವು ಮಕ್ಕಳ ಆಯ್ಕೆಯಲ್ಲ ಮತ್ತು ಇದು ಅಂತರರಾಷ್ಟ್ರೀಯ
ಒಪ್ಪಂದಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು, ಚಿಕಿತ್ಸಕವಲ್ಲದ ಮುಂಜಿಯನ್ನು ಕಾನೂನುಬಾಹಿರವಾಗಿ ಘೋಷಿಸಬೇಕೆಂದು ಸಂಘಟನೆಯು ಮನವಿಯಲ್ಲಿ ಒತ್ತಾಯಿಸಿದೆ.
ಈ ಕೃತ್ಯವನ್ನು ಜಾಮೀನು ರಹಿತ ಅಪರಾಧವೆಂದು ಘೋಷಣೆ ಮಾಡಿ, ಅದರ ವಿರುದ್ಧ ಶಾಸನಬದ್ಧ ಕಾನೂನನ್ನು ತರಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.