ಬ್ರಾಸಿಲಿಯಾ: ಬ್ರೆಜಿಲ್ ನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಖ್ಯಾತ ಗಾಯಕಿ, ಗ್ರ್ಯಾಮಿ ಪ್ರಶಸ್ತಿ ವಿಜೇತೆ, ಮರಿಲಿಯಾ ಮೆಂಡೊಂಕೊ (26) ಮೃತಪಟ್ಟಿದ್ದಾರೆಂದು ಮೂಲಗಳು ತಿಳಿಸಿವೆ.
ಅವರು ಬ್ರೆಜಿಲ್‍ನ ಮಿನಾಸ್‍ಗೆ ಸಂಗೀತ ಕಾರ್ಯಕ್ರಮ ನೀಡಲು ಹೋಗುತ್ತಿರುವ ವೇಳೆ, ಮಿನಾಸ್ ಗೈರಸ್ ಎಂಬ ಪ್ರಾಂತ್ಯದಲ್ಲಿ ವಿಮಾನ ಪತನಗೊಂಡು ಇಬ್ಬರು ಪೈಲೆಟ್‍ಗಳು ಸೇರಿ ಐವರು ಮೃತಪಟ್ಟಿದ್ದಾರೆ.