ಚೈತ್ರಾ ಕುಂದಾಪುರ ಕೊಡಗು ಪ್ರವೇಶ ನಿರ್ಬಂಧಿಸುವಂತೆ ಜಿಲ್ಲಾಧಿಕಾರಿಗೆ PFI ಮನವಿ

Prasthutha|

ಮಡಿಕೇರಿ: ಚೈತ್ರಾ ಕುಂದಾಪುರ ಕೊಡಗು ಪ್ರವೇಶ ನಿರ್ಬಂಧಿಸುವಂತೆ ಜಿಲ್ಲಾಧಿಕಾರಿಗೆ ಪಿಎಫ್ ಐ ಮನವಿ ಮಾಡಿದೆ.

- Advertisement -

 07/2022 ರಂದು ಸೋಮವಾರ ಪೇಟೆಯಲ್ಲಿ ವಿಶ್ವಹಿಂದೂಪರಿಷತ್, ಭಜರಂಗದಳ,ದುರ್ಗವಾಹಿನಿ ವತಿಯಿಂದ ಹಿಂದೂ ಜನಜಾಗೃತಿ ಸಭೆ ಹಮ್ಮಿಕೊಂಡಿದ್ದು, ಆ ಸಮಾವೇಶಕ್ಕೆ ಚೈತ್ರಾ ಕುಂದಾಪುರ ಆಗಮಿಸುತ್ತಿದ್ದಾರೆ.  ಚೈತ್ರ ಕುಂದಾಪುರ ಭಾಷಣವೂ ಕೋಮು ದ್ವೇಷದಿಂದ ಕೂಡಿದ್ದಾಗಿದ್ದು ಈಗಾಗಲೇ ಅವರ ಮೇಲೆ ಹಲವಾರು ಪ್ರಕರಣಗಳು ದಾಖಲಾಗಿವೆ.

ಅದೇ ರೀತಿ ಕೆಲವೊಂದು ಕಡೆ ನಿರ್ಬಂಧ ವಿಧಿಸಲಾಗಿದೆ. ಕೊಡಗಿನ ಜನ ಶಾಂತಿ ಮತ್ತು ಕೋಮು ಸೌಹಾರ್ದತೆಯನ್ನು ಬಯಸುವರಾಗಿದ್ದು. ಇಲ್ಲಿ ಎಲ್ಲಾ ಧರ್ಮದ ಜನರು ಪರಸ್ಪರ ಸೌಹಾರ್ದತೆಯಿಂದ ಬದುಕುತ್ತಿದ್ದಾರೆ.ಚೈತ್ರ ಕುಂದಾಪುರ ಅವರು ಕೊಡಗು ಜಿಲ್ಲೆಗೆ ಆಗಮಿಸಿ ಕೋಮು ದ್ವೇಷದ ಭಾಷಣ ಮಾಡಿದ್ದಲ್ಲಿ ಇಲ್ಲಿನ ಕೋಮು-ಸೌಹಾರ್ದತೆಗೆ ಮತ್ತು ಶಾಂತಿ ಸುವ್ಯಸ್ಥೆಗೆ ದಕ್ಕೆಯಾದರೆ ಅದಕ್ಕೆ ನೇರ ಹೊಣೆ ಜಿಲ್ಲಾಡಳಿತವಾಗಿರುತ್ತದೆ. ಸೋಮವಾರಪೇಟೆಯಲ್ಲಿ ಶಾಂತಿ ಸುವ್ಯವಸ್ಥೆ ಧಕ್ಕೆ ಉಂಟಾಗುವ ಸಾಧ್ಯತೆ ಹೆಚ್ಚಾಗಿರುವುದರಿಂದ ಚೈತ್ರ ಕುಂದಾಪುರ ಅವರಿಗೆ ಕೊಡಗು ಪ್ರವೇಶಿಸದಂತೆ ಜಿಲ್ಲಾಧಿಕಾರಿಗಳ ನಿರ್ಬಂಧ ಹೇರಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದೆ.

- Advertisement -

ಈ ಸಂಧರ್ಭದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ರಹ್ಮಾನ್,ಜಿಲ್ಲಾ ಸಮಿತಿ ಸದಸ್ಯರಾದ ಆಶ್ರಫ್ ಕೊಳಕೇರಿ,ರಿಯಾಝ್ ಮಡಿಕೇರಿ, ಹಾಗೂ ಖಾಲಿದ್ ಹೊಸತೋಟ ನಿಯೋಗದಲ್ಲಿದ್ದರು.



Join Whatsapp
Exit mobile version