ಪಿಎಫ್ಐ ಬ್ಯಾಂಕ್ ಖಾತೆ ಮುಟ್ಟುಗೋಲು: ಮಡಿಕೇರಿಯಲ್ಲಿ ಕಾರ್ಯಕರ್ತರಿಂದ ಪ್ರತಿಭಟನೆ

Prasthutha|

ಮಡಿಕೇರಿ: ಮಡಿಕೇರಿ: ಜಾರಿ ನಿರ್ದೇಶನಾಲಯ (ಈಡಿ) ಪಾಪ್ಯಲುರ್ ಫ್ರಂಟ್ ಆಫ್ ಇಂಡಿಯಾದ ಬ್ಯಾಂಕ್ ಖಾತೆ ಮುಟ್ಟುಗೋಲು ಹಾಕಿರುವುದನ್ನು ವಿರೋಧಿಸಿ ಮಡಿಕೇರಿಯಲ್ಲಿ ಶುಕ್ರವಾರ ಪಿಎಫ್ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

- Advertisement -

ಮಡಿಕೇರಿಯ ಚೌಕಿ ವೃತ್ತದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬ್ಯಾಂಕ್ ಖಾತೆಗಳ ಮೇಲೆ ತಾತ್ಕಾಲಿಕ ಮುಟ್ಟುಗೋಲು ಹಾಕಿದ ED ಕ್ರಮದ ವಿರುದ್ಧ ಕಾರ್ಯಕರ್ತರು ಆಕ್ರೋಶ ಹೊರಹಾಕಿ, ED, RSS ,BJP ವಿರುದ್ದ ಘೋಷಣೆ ಕೂಗಿದರು.


ಈ ವೇಳೆ ಮಾತನಾಡಿದ ಮುಖಂಡರು, ಪಾಪ್ಯುಲರ್ ಫ್ರಂಟ್ ಸಂಘಟನೆಯನ್ನು ಈಡಿ ಮತ್ತು ಎನ್ ಐ ಎ ಮೂಲಕ ಆರ್ ಎಸ್ ಎಸ್ ಮತ್ತು ಬಿ ಜೆ ಪಿ ಹೆದರಿಸಲು ನೋಡುತ್ತಿದೆ. ಇದು ಅಧಿಕಾರದ ದುರ್ಬಳಕೆ ಮತ್ತು ಪ್ರಜಾಸತ್ತಾತ್ಮಕ ಹಕ್ಕಿನ ನಿರಾಕರಣೆಯಾಗಿದೆ. ಯಾವುದೇ ಕಾರಣಕ್ಕೂ ಇಂತಹ ಬೆದರಿಕೆಗಳಿಗೆ ಹೆದರುವುದಿಲ್ಲ ಎಂದು ಹೇಳಿದರು.

- Advertisement -

.

Join Whatsapp
Exit mobile version