Home ಟಾಪ್ ಸುದ್ದಿಗಳು ಝೀ ಮೀಡಿಯಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಪಿಎಫ್ಐ

ಝೀ ಮೀಡಿಯಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಪಿಎಫ್ಐ

ಹೊಸದಿಲ್ಲಿ: ಉತ್ತರ ಪ್ರದೇಶದ ಚುನಾವಣೆಗೆ ಮುನ್ನ ರೋಹಿಂಗ್ಯ ಮುಸ್ಲಿಮರಿಗೆ ನಕಲಿ ಚುನಾವಣಾ ಗುರುತಿನ ಚೀಟಿ ಪಡೆಯಲು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಹಣಕಾಸು ನೆರವು ನೀಡಿದೆ ಎಂದು ಸುಳ್ಳಾರೋಪ ಮಾಡಿದ ಝೀ ಮೀಡಿಯಾ ಕಾರ್ಪೊರೇಶನ್ ವಿರುದ್ಧ ಪಿಎಫ್ಐ ಮಾನನಷ್ಟ ಮೊಕದ್ದಮೆ ಹೂಡಿದೆ.

ಝೀ ಮೀಡಿಯಾ ಮುಖ್ಯಸ್ಥ ಹಾಗೂ ಪ್ರಧಾನ ಸಂಪಾದಕರಾದಂತಹ ಪುರುಷೋತ್ತಮ್ ವೈಷ್ಣವಿ ಮತ್ತು ನಿರೂಪಕರಾದಂತಹ ಶಾಲಿನಿ ಕಫೂರ್ ತಿವಾರಿ ಹಾಗೂ ಅಂಜಿತ್ ಶ್ರೀ ವಾಸ್ತವ್ ವಿರುದ್ಧ ಸುಳ್ಳಾರೋಪ ಮತ್ತು ಸಂಘಟನೆಯನ್ನು ತೇಜೋವಧೆ ಮಾಡಲೆತ್ನಿಸಿದ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದೆ. ಸಂಘಟನೆಯ ವರ್ಚಸ್ಸಿಗೆ ಧಕ್ಕೆ ತರುವಂತ ವೀಡಿಯೋ ತುಣುಕನ್ನು ಫೇಸ್ ಬುಕ್ ಮತ್ತು ಯೂ ಟ್ಯೂಬ್ ನಿಂದ ತೆಗೆದು ಹಾಕುವಂತೆ ನ್ಯಾಯಲಯ ಆದೇಶಿಸಿದೆ.

Join Whatsapp
Exit mobile version