Home ಟಾಪ್ ಸುದ್ದಿಗಳು ಅಚ್ಛೇ ದಿನ್‌! : ಪೆಟ್ರೋಲ್‌ ಬೆಲೆ ಸಾರ್ವಕಾಲಿಕ ದಾಖಲೆ; ಡೀಸೆಲ್‌ ಬೆಲೆಯೂ ಲೀಟರ್‌ ಗೆ 100...

ಅಚ್ಛೇ ದಿನ್‌! : ಪೆಟ್ರೋಲ್‌ ಬೆಲೆ ಸಾರ್ವಕಾಲಿಕ ದಾಖಲೆ; ಡೀಸೆಲ್‌ ಬೆಲೆಯೂ ಲೀಟರ್‌ ಗೆ 100 ರೂ. ತಲುಪಲು ಕೆಲವೇ ಪೈಸೆಗಳು ಬಾಕಿ!

ನವದೆಹಲಿ : ದೇಶದ ಹಲವು ರಾಜ್ಯಗಳಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ ಗೆ 100 ರೂ. ದಾಟಿ ಹಲವು ದಿನಗಳೇ ಕಳೆದಿವೆ. ಇದೀಗ ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಡೀಸೆಲ್‌ ಬೆಲೆಯೂ ಲೀಟರ್‌ ಗೆ 100 ಗಡಿ ದಾಟಲು ಇನ್ನು ಕೆಲವೇ ಪೈಸೆಗಳು ಬಾಕಿಯಿವೆ.

ರಾಜಸ್ಥಾನದ ಗಂಗಾನಗರದಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ ಗೆ 106.94 ರೂ. ಆಗಿದ್ದರೆ, ಡೀಸೆಲ್‌ ಬೆಲೆ ಲೀಟರ್‌ ಗೆ 99.80 ರೂ. ಆಗಿದೆ. ಡೀಸೆಲ್‌ ಬೆಲೆ ಲೀಟರ್‌ ಗೆ 100 ರೂ. ಆಗಲು ಈಗ ಕೇವಲ 20 ಪೈಸೆ ಮಾತ್ರ ಬಾಕಿಯಿದೆ.

ಮಧ್ಯಪ್ರದೇಶದ ಎಲ್ಲಾ ನಗರಗಳಲ್ಲಿ ಪೆಟ್ರೋಲ್‌ ಗೆ ಲೀಟರ್‌ ಗೆ 100 ರೂ. ಗಡಿ ದಾಟಿ ತಿಂಗಳುಗಳೇ ಕಳೆದಿವೆ. ಮಧ್ಯಪ್ರದೇಶದ ಅನುಪುರದಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ ಗೆ 106.59 ರೂ. ಆಗಿದೆ ಮತ್ತು ಡೀಸೆಲ್‌ ಬೆಲೆ ಲೀಟರ್‌ ಗೆ 97.74 ರೂ. ಆಗಿದೆ.

ಇನ್ನುಳಿದಂತೆ ಮಹಾರಾಷ್ಟ್ರ, ತೆಲಂಗಾಣ, ಕರ್ನಾಟಕದಲ್ಲಿಯೂ ಪೆಟ್ರೋಲ್‌ ಬೆಲೆ 100 ರೂ. ದಾಟಿದೆ. ಕರ್ನಾಟಕದ ಬಳ್ಳಾರಿಯಲ್ಲಿ ಪೆಟ್ರೋಲ್‌ ಬೆಲೆ 100.93 ರೂ., ಬೀದರ್‌ ನಲ್ಲಿ 100.15 ರೂ. ಚಿಕ್ಕಮಗಳೂರಿನಲ್ಲಿ 100.23 ರೂ., ದಾವಣಗೆರೆಯಲ್ಲಿ 100.92 ರೂ., ಕೊಡಗಿನಲ್ಲಿ 100.14 ರೂ., ಕೊಪ್ಪಳದಲ್ಲಿ 100.06 ರೂ., ಶಿವಮೊಗ್ಗದಲ್ಲಿ 100.38 ರೂ., ಉತ್ತರ ಕನ್ನಡದಲ್ಲಿ 101.07 ರೂ., ತುಮಕೂರಿನಲ್ಲಿ 100.04 ರೂ. ಆಗಿದೆ.  

Join Whatsapp
Exit mobile version