Home ಟಾಪ್ ಸುದ್ದಿಗಳು ಜನರ ಸಮಸ್ಯೆಗಳು ಮತ್ತು ಕಾಳಜಿಗಳಿಗೆ ಜಯ ಸಿಕ್ಕಿದೆ: ಅಖಿಲೇಶ್ ಯಾದವ್

ಜನರ ಸಮಸ್ಯೆಗಳು ಮತ್ತು ಕಾಳಜಿಗಳಿಗೆ ಜಯ ಸಿಕ್ಕಿದೆ: ಅಖಿಲೇಶ್ ಯಾದವ್

ಲಖನೌ: ನಕಾರಾತ್ಮಕ ರಾಜಕೀಯದ ಯುಗ ಅಂತ್ಯವಾಗಿದೆ. ಜನರ ಸಮಸ್ಯೆಗಳು ಮತ್ತು ಕಾಳಜಿಗಳಿಗೆ ಜಯ ಸಿಕ್ಕಿದೆ ಎಂದು ಲೋಕಸಭಾ ಚುನಾವಣೆಯ ಫಲಿತಾಂಶವನ್ನು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ.


ಉತ್ತರ ಪ್ರದೇಶದ ಲಖನೌನಲ್ಲಿರುವ ಸಮಾಜವಾದಿ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ‘ಒಂದು ಅರ್ಥದಲ್ಲಿ ಇದು ಇಂಡಿಯಾ ಮೈತ್ರಿಕೂಟದ ಜಯ. ನಮ್ಮ ಪಿಡಿಎ (ಹಿಂದುಳಿದ ವರ್ಗ, ದಲಿತ ಹಾಗೂ ಅಲ್ಪಸಂಖ್ಯಾತ) ತಂತ್ರ ಕೆಲಸ ಮಾಡಿದೆ. ಚುನಾವಣೆಯಲ್ಲಿ ನಮ್ಮದು ಮೂರನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಪಕ್ಷಕ್ಕೆ ಜನರಿಂದ ಭಾರಿ ಬೆಂಬಲ ವ್ಯಕ್ತವಾಗಿದೆ’ ಎಂದು ಅವರು ನುಡಿದಿದ್ದಾರೆ.

Join Whatsapp
Exit mobile version