Home ಟಾಪ್ ಸುದ್ದಿಗಳು ಭಕ್ತರ ಹರಕೆ ಸಂದಾಯ; ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ ಹಳೆಯ ನೋಟುಗಳು ಪತ್ತೆ

ಭಕ್ತರ ಹರಕೆ ಸಂದಾಯ; ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ ಹಳೆಯ ನೋಟುಗಳು ಪತ್ತೆ

ಮೈಸೂರು: ಕಾಣಿಕೆ ಹುಂಡಿಯಲ್ಲಿ ಒಂದು ಲಕ್ಷಕ್ಕೂ ಹೆಚ್ಚಿನ ರದ್ದಾದ ನೋಟುಗಳು ಪತ್ತೆಯಾದ ಘಟನೆ ಚಾಮುಂಡಿಬೆಟ್ಟದಲ್ಲಿ ನಡೆದಿದೆ.

ಚಾಮುಂಡಿ ಸನ್ನಿಧಾನಕ್ಕೆ ಬಂದ ಭಕ್ತರು ತಮ್ಮ ಹರಕೆ ಈಡೇರಿಕೆಗೆ ಒಂದು ಲಕ್ಷಕ್ಕೂ ಹೆಚ್ಚಿನ ಹಣವನ್ನ ಹುಂಡಿಗೆ ಹಾಕಿದ್ದಾರೆ.

ಆಷಾಢ ಮಾಸದ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಬಂದ ಭಕ್ತರು ಹುಂಡಿಯಲ್ಲಿ ಹಣ ಹಾಕಿದ್ದಾರೆ. ಆದರೆ, 2016 ನವೆಂಬರ್ 8 ರಂದು ನೋಟುಗಳನ್ನ ಅಮಾನ್ಯೀಕರಣಗೊಳಿಸಿದ್ದರೂ ಇಂದಿಗೂ ಹಳೆಯ 500 ಹಾಗೂ 1000 ರ ಮುಖ ಬೆಲೆಯ ನೋಟುಗಳು ಕಂಡು ಬರುತ್ತಿರುವು ದೇವಸ್ಥಾನದ ಸಿಬ್ಬಂದಿಗಳ ಅಚ್ಚರಿಗೆ ಕಾರಣವಾಗಿದೆ.

Join Whatsapp
Exit mobile version