‘ಫೆಲೆಸ್ತೀನೀಯರನ್ನು ಮೈಕ್ರೋಸಾಫ್ಟ್ ತಂತ್ರಜ್ಞಾನದಿಂದ ಕೊಲ್ಲಲಾಗಿದೆ’: ರಾಜೀನಾಮೆ ಕೊಟ್ಟ ಭಾರತೀಯ ಟೆಕ್ಕಿ

- Advertisement -

- Advertisement -

ವಾಷಿಂಗ್ಟನ್: ಗಾಝಾದಲ್ಲಿ ಫೆಲೆಸ್ತೀನೀಯರ ಹತ್ಯೆಗೆ ಸಹಾಯ ಮಾಡಲು ಮೈಕ್ರೋಸಾಫ್ಟ್​ ಕಂಪನಿಯ ಸಾಫ್ಟ್​ ವೇರ್ ಬಳಕೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಭಾರತ ಮೂಲದ ಟೆಕ್ಕಿಯೊಬ್ಬರು ರಾಜೀನಾಮೆ ನೀಡಿದ್ದಾರೆ.

ಕಂಪನಿಯ 50ನೇ ವಾರ್ಷಿಕೋತ್ಸವದ ಆಚರಣೆ ಸಂದರ್ಭದಲ್ಲಿ ಭಾರತ ಮೂಲದ ಟೆಕ್ಕಿಯೊಬ್ಬರು ಮಾಜಿ ಮತ್ತು ಹಾಲಿ ಮೈಕ್ರೋಸಾಫ್ಟ್​ ಸಿಇಒಗಳಾದ ಬಿಲ್​ ಗೇಟ್ಸ್​, ಸ್ಟೀವ್ ಬಾಲ್ಮರ್ ಮತ್ತು ಸತ್ಯ ನಾದೆಲ್ಲಾ ಅವರಿಗೆ ಪ್ರಶ್ನೆಯನ್ನು ಕೇಳಿದ್ದಾರೆ.

- Advertisement -

ಮೈಕ್ರೋಸಾಫ್ಟ್‌ ನ ಕೃತಕ ಬುದ್ಧಿಮತ್ತೆ ವಿಭಾಗದ ಸಾಫ್ಟ್‌ ವೇರ್ ಎಂಜಿನಿಯರ್ ವನಿಯಾ ಅಗರವಾಲ್, ಪ್ಯಾನಲ್ ಚರ್ಚೆಗೆ ಅಡ್ಡಿಪಡಿಸಿದರು. ನಿಮಗೆಲ್ಲರಿಗೂ ನಾಚಿಕೆಯಾಗಬೇಕು. ನೀವೆಲ್ಲರೂ ಕಪಟಿಗಳೇ. ಗಾಜಾದಲ್ಲಿ 50,000 ಪ್ಯಾಲೆಸ್ಟೀನಿಯನ್ನರನ್ನು ಮೈಕ್ರೋಸಾಫ್ಟ್ ತಂತ್ರಜ್ಞಾನದಿಂದ ಕೊಲ್ಲಲಾಗಿದೆ. ಇಸ್ರೇಲ್ ಜೊತೆಗಿನ ಸಂಬಂಧವನ್ನು ಕಡಿತಗೊಳಿಸಿ ಎಂದು ಕೂಗಿ ಹೇಳಿದ್ದಾರೆ.

ಇಸ್ರೇಲ್‌ ನ ರಕ್ಷಣಾ ಸಚಿವಾಲಯದೊಂದಿಗೆ ಟೆಕ್ ಕಂಪನಿಯು 133 ಮಿಲಿಯನ್ ಡಾಲರ್ ಕ್ಲೌಡ್ ಮತ್ತು AI ಒಪ್ಪಂದವನ್ನು ಅವರು ಮತ್ತಷ್ಟು ಖಂಡಿಸಿದರು. ಕೂಡಲೇ ಅವರನ್ನು ಸಭಾಂಗಣದಿಂದ ಹೊರಗೆ ಕರೆದೊಯ್ಯಲಾಯಿತು, ಆದರೆ ಕಾರ್ಯಕ್ರಮದಲ್ಲಿದ್ದ ಕೆಲವು ಉದ್ಯೋಗಿಗಳು ಗದ್ದಲ ಮಾಡಲು ಪ್ರಾರಂಭಿಸಿದರು.

ನಂತರ ಅಗರ್ವಾಲ್ ಇ-ಮೇಲ್‌ ನಲ್ಲಿ ತಮ್ಮ ರಾಜೀನಾಮೆ ಘೋಷಿಸಿದರು. ಟೆಕ್ ನ್ಯೂಸ್ ವೆಬ್​ ಸೈಟ್ ದಿ ವರ್ಜ್​ ವರದಿ ಮಾಡಿರುವ ಪ್ರಕಾರ, ಅಗರ್ವಾಲ್ ತಮ್ಮ ರಾಜೀನಾಮೆಯಲ್ಲಿ ಎಲ್ಲರಿಗೂ ನಮಸ್ಕಾರ, ನನ್ನ ಹೆಸರು ವಾನಿಯಾ, ಮತ್ತು ಈ ಕಂಪನಿಯಲ್ಲಿ ಸಾಫ್ಟ್‌ ವೇರ್ ಎಂಜಿನಿಯರ್ ಆಗಿ ಒಂದೂವರೆ ವರ್ಷಗಳ ನಂತರ, ನಾನು ಮೈಕ್ರೋಸಾಫ್ಟ್ ತೊರೆಯಲು ನಿರ್ಧರಿಸಿದ್ದೇನೆ. ಏಪ್ರಿಲ್ 11 ರಂದು ನನ್ನ ಕೊನೆಯ ಕೆಲಸದ ದಿನ ಎಂದು ಬರೆದಿದ್ದಾರೆ.

- Advertisement -


Must Read

Related Articles