Home ಟಾಪ್ ಸುದ್ದಿಗಳು ಮಂಗಳೂರಿನಲ್ಲಿ ಪಾಕಿಸ್ತಾನದ ಏಜೆಂಟ್‌ಗಳು ಹುಟ್ಟಿಕೊಳ್ಳುತ್ತಾರೆ : ಎ. ನಾರಾಯಣಸ್ವಾಮಿ

ಮಂಗಳೂರಿನಲ್ಲಿ ಪಾಕಿಸ್ತಾನದ ಏಜೆಂಟ್‌ಗಳು ಹುಟ್ಟಿಕೊಳ್ಳುತ್ತಾರೆ : ಎ. ನಾರಾಯಣಸ್ವಾಮಿ

ಚಾಮರಾಜನಗರ: ಕರ್ನಾಟಕದ ಕರಾವಳಿ ಮಂಗಳೂರಿನಲ್ಲಿ ಹಲವು ಸಂಘಟನೆಗಳಿದ್ದು, ಪಾಕಿಸ್ತಾನದ ಏಜೆಂಟ್‌ಗಳು ಹುಟ್ಟಿಕೊಳ್ಳುವುದೇ ಅಲ್ಲಿ ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮುಸ್ಲಿಂ ಡಿಫೆನ್ಸ್ ಫೋರ್ಸ್ (ಎಂಡಿಎಫ್) ಎಂಬ ಸಂಘಟನೆ ಬಗ್ಗೆ ಚಾಮರಾಜನಗರದಲ್ಲಿ ಪ್ರತಿಕ್ರಿಯಿಸಿದ ಸಚಿವರು , ಮಂಗಳೂರು, ಕೇರಳ, ದೆಹಲಿ ಸೇರಿದಂತೆ ಎಲ್ಲೇ ಸಂಘಟನೆಗಳು ಹುಟ್ಟಿಕೊಳ್ಳಲಿ, ಅವರನ್ನು ಸದೆಬಡಿಯುತ್ತೇವೆ ಯಾವುದೇ ಕಾರಣಕ್ಕೂ ಅವರನ್ನು ಬಿಡುವುದಿಲ್ಲ ಎಂದರು.

ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದೇಶದ ಗೌರವ, ಸಾರ್ವಭೌಮತೆಗೆ ಕುಂದು ತರುವ ಸಂಸ್ಥೆಗಳನ್ನು ಬಿಡುತ್ತಿಲ್ಲ. ಯಾವುದನ್ನು ಯಾವ ಕಾಲಘಟ್ಟದಲ್ಲಿ ಬ್ಯಾನ್ ಮಾಡಬೇಕೋ, ಆವಾಗ ಮಾಡುತ್ತೇವೆ ಎಂದು ತಿಳಿಸಿದರು

Join Whatsapp
Exit mobile version