Home ರಾಷ್ಟ್ರೀಯ ಬಿಜೆಪಿ ಧಾರ್ಮಿಕ ಸಂಘರ್ಷ ಸೃಷ್ಟಿಸಿ ಚುನಾವಣೆ ಗೆಲ್ಲುತ್ತಿದೆ – ಅಶೋಕ್ ಗೆಹ್ಲೋಟ್

ಬಿಜೆಪಿ ಧಾರ್ಮಿಕ ಸಂಘರ್ಷ ಸೃಷ್ಟಿಸಿ ಚುನಾವಣೆ ಗೆಲ್ಲುತ್ತಿದೆ – ಅಶೋಕ್ ಗೆಹ್ಲೋಟ್

► ಹಿಂದೂರಾಷ್ಟ್ರ ಮಾಡಲು ಹೊರಟರೆ ಭಾರತಕ್ಕೂ ಪಾಕಿಸ್ತಾನದ ಸ್ಥಿತಿಯ ಎಚ್ಚರಿಕೆ

ಅಹ್ಮದಾಬಾದ್: ಆಡಳಿತಾರೂಢ ಬಿಜೆಪಿಯ ಬಳಿ ಯಾವುದೇ ಅಭಿವೃದ್ಧಿ ಕಾರ್ಯಗಳಿಲ್ಲ. ಹೀಗಾಗಿ ಪ್ರತೀ ಚುನಾವಣೆಯಲ್ಲೂ ಬಿಜೆಪಿ ಧರ್ಮದ ಆಧಾರದಲ್ಲಿ ಗೆಲ್ಲುತ್ತಿದೆ ಎಂದು ರಾಜಸ್ತಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

ಒಂದು ವೇಳೆ ಬಿಜೆಪಿಯು ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ಪ್ರಯತ್ನಿಸಿದರೆ ಪಾಕಿಸ್ತಾನದ ಸ್ಥಿತಿಯೇ ಭಾರತಕ್ಕೂ ಬರಲಿದೆ ಎಂದು ಅವರು ಎಚ್ಚರಿಸಿದ್ದಾರೆ.

ಅವರು, ಈ ವರ್ಷಾಂತ್ಯದಲ್ಲಿ ಗುಜರಾತ್‌ ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದ ಸಿದ್ಧತೆಯ ಪರಿಶೀಲನೆಗೆ ಎರಡು ದಿನದ ಗುಜರಾತ್ ಪ್ರವಾಸ ಕೈಗೊಂಡಿದ್ದರು. 

ಪ್ರವಾಸದ ಕೊನೆಯ ದಿನವಾದ ಇಂದು ಪತ್ರಕರ್ತರೊಂದಿಗೆ ಮಾತನಾಡಿದ ಗೆಹ್ಲೋಟ್, ಬಿಜೆಪಿಗೆ ಯಾವುದೇ ಆಡಳಿತ ನೀತಿಯೋ, ಸೈದ್ಧಾಂತಿಕ ಬದ್ಧತೆಯೋ ಇಲ್ಲ. ಪ್ರತೀ ಚುನಾವಣೆಯನ್ನೂ ಇದು ಫ್ಯಾಸಿಸ್ಟ್ ನೀತಿ, ಧರ್ಮದ ಆಧಾರದಲ್ಲಿ ಎದುರಿಸಿ ಗೆಲ್ಲುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಧರ್ಮದ ಆಧಾರದಲ್ಲಿ ಚುನಾವಣೆ ಎದುರಿಸುವುದು ಅತಿ ಸುಲಭದ ತಂತ್ರವಾಗಿದ್ದು, ಹಿಟ್ಲರ್ ಕೂಡಾ ಇದನ್ನೇ ಮಾಡಿದ್ದ ಎಂದವರು ತಿಳಿಸಿದರು.

Join Whatsapp
Exit mobile version