ಮೈಸೂರು: ವಿಪಕ್ಷ ನಾಯಕ ಸಿದ್ದರಾಮಯ್ಯನವರ ಕಾರಿಗೆ ಮೊಟ್ಟೆ ಎಸೆದು ಗೂಂಡಾ ವರ್ತನೆ ತೋರಿದ ಬಿಜೆಪಿ ಕಾರ್ಯಕರ್ತರ ಕೃತ್ಯವನ್ನು ಖಂಡಿಸಿ ಮಾಜಿ ಶಾಸಕ ಎಂ. ಕೆ. ಸೋಮಶೇಖರ್ ನೇತೃತ್ವದಲ್ಲಿ ಮೈಸೂರು ನಗರದ ರಾಮಸ್ವಾಮಿ ವೃತ್ತದಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಲಾಯಿತು.
ಈ ವೇಳೆ ಮಾತನಾಡಿದ ಎಂ.ಕೆ.ಸೋಮಶೇಖರ್, ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹುಟ್ಟು ಹಬ್ಬದ ನಿಮಿತ್ತ ದಾವಣಗೆರೆಯಲ್ಲಿ 75ನೇ ಅಮೃತ ಮಹೋತ್ಸವದಲ್ಲಿ 15 ಲಕ್ಷಕ್ಕೂ ಹೆಚ್ಚು ಜನ ಸೇರಿ ಅಭೂತಪೂರ್ವ ಯಶಸ್ವಿ ದೊರೆತು ರಾಷ್ಟ್ರದಲ್ಲೇ ಹೊಸ ಸಂಚಲನ ಸೃಷ್ಟಿಯಾಗಿದೆ. ಅದನ್ನು ಸಹಿಸಿಕೊಳ್ಳದ ಹಾಗೂ ಸಿದ್ದರಾಮಯ್ಯನವರ ರಾಜಕೀಯ ಶಕ್ತಿಯನ್ನು ಎದುರಿಸಲಾಗದ ಬಿಜೆಪಿ, ಇಂದು ಸಿದ್ದರಾಮಯ್ಯನವರು ಮಡಿಕೇರಿಯಲ್ಲಿ ಪ್ರವಾಹ ಪರಿಸ್ಥಿತಿ, ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪೂರ್ವನಿಯೋಜಿತ ಪಿತೂರಿ ಮಾಡಿ ಹಣ ಕೊಟ್ಟು ಪುಂಡರನ್ನು ಎತ್ತಿಕಟ್ಟಿ ಕಪ್ಪು ಬಾವುಟ ತೋರಿಸಿ, ಮೊಟ್ಟೆ ಎಸೆದು, ಗೂಂಡಾ ವರ್ತನೆ ತೋರಿಸಿ ವಿಕೃತಿ ಮೆರೆದಿದ್ದಾರೆ ಎಂದು ಆರೋಪಿಸಿದರು.
ಬಳಿಕ ಟಯರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಕಾಂಗ್ರೆಸ್ ಮುಖಂಡರಾದ ಹರೀಶ್ ಗೌಡ, ನಗರಾಧ್ಯಕ್ಷರಾದ ಆರ್ ಮೂರ್ತಿ, ಮಹಿಳಾ ಅಧ್ಯಕ್ಷೆ ಪುಷ್ಪಲತಾ ಚಿಕ್ಕಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಿ ಸೋಮಶೇಖರ್, ಕೆಪಿಸಿಸಿ ಸದಸ್ಯೆ ವೀಣಾ, ಶ್ರೀಧರ್, ಭವ್ಯ, ವಿದ್ಯಾ, ಪಾಲಿಕೆ ಸದಸ್ಯರಾದ ಜೆ ಗೋಪಿ, ಶೋಭಾ ಸುನೀಲ್, ಮಾಜಿ ಸದಸ್ಯ ಎಂ ಸುನೀಲ್, ಶಿವಣ್ಣ, ಅಹಿಂದ ಕೆ ಎಸ್ ಶಿವರಾಮು, ಪಾನಿಪುರಿ ಶಿವು, ವೀರಶೈವ ಮುಖಂಡ ಯೋಗೇಶ್, ಡೈರಿ ವೆಂಕಟೇಶ್, ಶಿವಮಲ್ಲು, ವಿಶ್ವ, ಜೋಡಿಹಕ್ಕಿ ಮಹದೇವು, ಆಶ್ರಯ ಮೂರ್ತಿ, ವಿಜಯ್ ಕುಮಾರ್, ಡಾ.ರಾಜಾರಾಂ, ಮಾಲೇಗೌಡ, ಲೋಕೇಶ್ ಕುಮಾರ್ ಮಾದಾಪುರ, ಯೋಗೇಶ್ ಉಪ್ಪಾರ, ರೋಹಿತ್, ಮಹೇಂದ್ರ ಕಾಗಿನೆಲೆ, ಸೋಮು ಸರಗೂರು, ಪೈಲ್ವಾನ್ ಮಹೇಶ್, ಅಭಿಷೇಕ್ ಶಿವಣ್ಣ, ಫಾರುಖ್, ಗುಣಶೇಖರ್ , ಛಾಯಾ, ಸುರೇಶ್ (ಪಾಪು), ರಜತ್, ಶಾದಿಕುಲ್ಲಾ ರೆಹಮಾನ್, ಇರ್ಫಾನ್, ಮಂಜು, ನಾಗೇಶ್ ಸೇರಿದಂತೆ ಹಲವು ಕಾರ್ಯಕರ್ತರು ಜಮಾಯಿಸಿದ್ದರು.