Home ಟಾಪ್ ಸುದ್ದಿಗಳು ದಾಸ್ಯದ ಸಂಕೋಲೆ ಕತ್ತರಿಸಿದ ತಾಲಿಬಾನಿಗರು | ಪಾಕ್ ಪ್ರಧಾನಿ ಇಮ್ರಾನ್ ಖಾನ್ ವ್ಯಾಖ್ಯಾನ

ದಾಸ್ಯದ ಸಂಕೋಲೆ ಕತ್ತರಿಸಿದ ತಾಲಿಬಾನಿಗರು | ಪಾಕ್ ಪ್ರಧಾನಿ ಇಮ್ರಾನ್ ಖಾನ್ ವ್ಯಾಖ್ಯಾನ

ಇಸ್ಲಾಮಾಬಾದ್: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗರ ಗೆಲುವು ದಾಸ್ಯದ ಸಂಕೋಲೆ ಕತ್ತರಿಸಿದಂತಾಗಿದೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ವ್ಯಾಖ್ಯಾನಿಸಿದ್ದಾರೆ. ಪಾಕಿಸ್ತಾನವು ತಾಲಿಬಾನ್ ಗೆಲುವನ್ನು ಒಪ್ಪಿದೆ. ತಾಲಿಬಾನ್ ಆಡಳಿತವು ಹೆಣ್ಣುಮಕ್ಕಳ ಶಿಕ್ಷಣ, ಉದ್ಯೋಗ, ನಾಗರಿಕ ಹಕ್ಕು ಮತ್ತು ಮದುವೆ ವಿಷಯದಲ್ಲಿ ಕಠಿಣ ನಿಲುವು ಹೊಂದಿರುತ್ತದೆಯೇ ಎಂಬುದು ಈಗ ಎದ್ದಿರುವ ಪ್ರಶ್ನೆಯಾಗಿದೆ ಎಂದು ಅವರು ತಿಳಿಸಿದ್ದಾರೆ.


ಇತರ ಸಂಸ್ಕೃತಿಯನ್ನು ಅನುಸರಿಸುವ ಸ್ಥಿತಿಯನ್ನು ಒಪ್ಪುವುದು ಎಂದರೆ ಅದು ಮಾನಸಿಕವಾಗಿ ನಮ್ಮನ್ನು ಸಹ ಊಳಿಗದವನಾಗಿಸುತ್ತದೆ, ಅದು ದಾಸ್ಯಕ್ಕಿಂತ ಹೀನವಾದುದು ಎಂದು ಇಂಗ್ಲಿಷ್ ಶಿಕ್ಷಣ ಮಾಧ್ಯಮದ ಬಗೆಗೆ ಅವರು ಹೇಳಿದರು. ಆ ಹಾದಿಯಲ್ಲಿ ಸಾಂಸ್ಕೃತಿಕ ದಾಸ್ಯವನ್ನು ಕಿತ್ತೊಗೆಯುವುದು ಅಸಾಧ್ಯ. ಈಗ ಅಫಘಾನಿಸ್ತಾನದಲ್ಲಿ ಏನಾಗಿದೆ ಎಂದರೆ ದಾಸ್ಯದ ಸಂಕೋಲೆ ಮುರಿಯಲಾಗಿದೆ ಎಂದು ಇಮ್ರಾನ್ ಖಾನ್ ಒತ್ತಿ ಹೇಳಿದರು.


ಹತ್ತು ದಿನಗಳ ಅವಧಿಯಲ್ಲಿ ತಾಲಿಬಾನಿಗರು ಅಫ್ಘಾನಿಸ್ತಾನವನ್ನು ಮರು ವಶಪಡಿಸಿಕೊಂಡಿದ್ದಾರೆ. ಆಗಸ್ಟ್ 31, ಯುಎಸ್ ಎ ಸೇನೆ ಪೂರ್ಣ ವಾಪಾಸು ಹೋಗುವ ಕೊನೆಯ ದಿನವಾಗಿದ್ದು, ಅದಕ್ಕೆ ಮೊದಲೇ ತಾಲಿಬಾನಿಗರು ಕಾಬೂಲಿನಲ್ಲಿ ವಿಜಯ ಧ್ವಜ ನೆಟ್ಟಿದ್ದಾರೆ.
ಅಧ್ಯಕ್ಷರಾಗಿದ್ದ ಅಶ್ರಫ್ ಘನಿ ಪರಾರಿಯಾಗುವಾಗ 20 ವರ್ಷಗಳ ಯುದ್ಧವನ್ನು ಉಗ್ರರು ಗೆದ್ದಿದ್ದಾರೆ ಎಂದಿದ್ದಾರೆ. ಅತಿ ವೇಗದಲ್ಲಿ ಬಿದ್ದು ಹೋದ ಸರಕಾರ ಮತ್ತು ಭಾನುವಾರ ರಾತ್ರಿ ತಾಲಿಬಾನ್ ಪಡೆ ರಾಷ್ಟ್ರಾಧ್ಯಕ್ಷರ ಭವನವನ್ನು ವಶ ಪಡಿಸಿಕೊಂಡ ವೇಗವನ್ನು ಕಂಡು ಜನ ದಂಗಾಗಿದ್ದಾರೆ. ವಿಮಾನ ನಿಲ್ದಾಣದಲ್ಲಿ ಈಗ ಭಾರೀ ಒತ್ತಡ ಉಂಟಾಗಿದ್ದು

Join Whatsapp
Exit mobile version