Home ಟಾಪ್ ಸುದ್ದಿಗಳು ಪಹಲ್ಗಾಮ್ ದಾಳಿ: ಹಿಂದೂಗಳನ್ನೇ ಹುಡುಕಿ ದಾಳಿ ಮಾಡಿರುವುದು ಆಘಾತಕಾರಿ; ಪರಮೇಶ್ವರ್

ಪಹಲ್ಗಾಮ್ ದಾಳಿ: ಹಿಂದೂಗಳನ್ನೇ ಹುಡುಕಿ ದಾಳಿ ಮಾಡಿರುವುದು ಆಘಾತಕಾರಿ; ಪರಮೇಶ್ವರ್

0

ಬೆಂಗಳೂರು: ಕಾಶ್ಮೀರದ ಪ್ರವಾಸಿ ತಾಣ ಪಹಲ್ಗಾಮ್ ನಲ್ಲಿ ಭಯೋತ್ಪಾದಕರು ಭೀಕರ ದಾಳಿ ಮಾಡಿರುವ ಬಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಬುಧವಾರ ಪ್ರತಿಕ್ರಿಯೆ ನೀಡಿದ್ದು, ”ಹಿಂದೂ ಗಳನ್ನೇ ಹುಡುಕಿ ದಾಳಿ ಮಾಡಿರುವುದು ಆಘಾತಕಾರಿ” ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ ” ಈ ದಾಳಿ ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ಭೀಕರವಾದದ್ದು, ನೀವು ಹಿಂದೂಗಳಾ ಎಂದು ಪ್ರಶ್ನಿಸಿ ದಾಳಿ ಮಾಡಿದ್ದಾರೆ ಎಂಬ ಮಾಹಿತಿ ಬರುತ್ತಿದೆ. ಅಂಥವರ ವಿರುದ್ಧ ಕೇಂದ್ರ ಸರಕಾರ ಮುಲಾಜಿಲ್ಲದೇ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.

ಮಿನಿ ಸ್ವಿಟ್ಜರ್‌ ಲ್ಯಾಂಡ್‌ ಎಂದೇ ಖ್ಯಾತಿಗಳಿಸಿರುವ ದಕ್ಷಿಣ ಕಾಶ್ಮೀರದ ಪಹಲ್ಗಾಮ್ ನಲ್ಲಿ ಭಯೋತ್ಪಾದಕರ ಅಟ್ಟಹಾಸಕ್ಕೆ ಕನ್ನಡಿಗರು ಸೇರಿದಂತೆ 28 ಪ್ರವಾಸಿಗರು ಮೃತಪಟ್ಟಿರುವ ನಡೆಸಿರುವ ಘಟನೆಗೆ ದೇಶವೇ ಬೆಚ್ಚಿ ಬಿದ್ದಿದೆ.

ಮೃತಪಟ್ಟವರಲ್ಲಿ ಒಬ್ಬರು ಯುಎಇ ಮತ್ತು ನೇಪಾಳ ಹಾಗೂ ಇಬ್ಬರು ಸ್ಥಳೀಯರು ಸೇರಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version