Home ಟಾಪ್ ಸುದ್ದಿಗಳು ಟ್ವಿಟರ್ ಸಿಇಒ ಅಗರವಾಲ್ ರನ್ನು ಕೆಲಸದಿಂದ ಹೊರದಬ್ಬಿದರೆ 300 ಕೋಟಿ ರೂ.ಗೂ ಹೆಚ್ಚು ಪರಿಹಾರ!

ಟ್ವಿಟರ್ ಸಿಇಒ ಅಗರವಾಲ್ ರನ್ನು ಕೆಲಸದಿಂದ ಹೊರದಬ್ಬಿದರೆ 300 ಕೋಟಿ ರೂ.ಗೂ ಹೆಚ್ಚು ಪರಿಹಾರ!

ವಾಷಿಂಗ್ಟನ್: ಎಲಾನ್ ಮಸ್ಕ್ ಖರೀದಿಸಿದ ಟ್ವಿಟರ್ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಪರಾಗ್ ಅಗರವಾಲ್ ಅವರನ್ನೇನಾದರೂ 12 ತಿಂಗಳೊಳಗೆ ಅವರ ಸ್ಥಾನದಿಂದ ವಜಾಗೊಳಿಸಿದರೆ, ಅದಕ್ಕೆ ಪ್ರತಿಯಾಗಿ ಕಂಪನಿಯು 42 ದಶಲಕ್ಷ, ಅಂದರೆ, ₹321 ಕೋಟಿಗಳನ್ನು ನೀಡಬೇಕಾಗುತ್ತದೆ ಎಂದು ಸಂಶೋಧನಾ ಸಂಸ್ಥೆ ‘ಈಕ್ವಿಲರ್’ ತಿಳಿಸಿದೆ.

ಅಗರವಾಲ್ ಅವರ ಮೂಲ ವೇತನ, ಎಲ್ಲಾ ಇಕ್ವಿಟಿ ಪಾವತಿ, ಹಲವು ಬಾಬ್ತುಗಳನ್ನು ಸೇರಿಸಿ ಈ ಮೊತ್ತವನ್ನು ಅಂದಾಜಿಸಲಾಗಿದೆ ಎಂದು ‘ಈಕ್ವಿಲರ್’ ವಕ್ತಾರರು ಹೇಳಿದ್ದಾರೆ,

ಟ್ವಿಟರ್ ನಲ್ಲಿ ಈ ಹಿಂದೆ ಮುಖ್ಯ ತಂತ್ರಜ್ಞರಾಗಿದ್ದ ಅಗರವಾಲ್ ಅವರನ್ನು ನವೆಂಬರ್ ನಲ್ಲಿ ಸಿಇಒ ಆಗಿ ನೇಮಿಸಲಾಗಿತ್ತು.

ಏಪ್ರಿಲ್ 14 ರಂದು ಟ್ವಿಟರ್ ಖರೀದಿ ಪ್ರಸ್ತಾವವನ್ನು ಮುಂದಿಟ್ಟಾಗ ಮಸ್ಕ್ ಅವರು ಸದ್ಯದ ಟ್ವಿಟರ್ ಕಾರ್ಯನಿರ್ವಹಣೆಯಲ್ಲಿ ವಿಶ್ವಾಸವಿಲ್ಲ ಎಂದೂ ಹೇಳಿದ್ದರು.

Join Whatsapp
Exit mobile version