Home ಟಾಪ್ ಸುದ್ದಿಗಳು ಕೋವಿಡ್ ಭೀತಿ: ಮೂರನೇ ಡೋಸ್ ಪಡೆಯುವಂತೆ ಡಾ. ಸುಧಾಕರ್ ಸಲಹೆ

ಕೋವಿಡ್ ಭೀತಿ: ಮೂರನೇ ಡೋಸ್ ಪಡೆಯುವಂತೆ ಡಾ. ಸುಧಾಕರ್ ಸಲಹೆ

ಬೆಂಗಳೂರು: ದೇಶದಲ್ಲಿ ಕೋವಿಡ್ ಸೋಂಕಿನ ನಾಲ್ಕನೇ ಅಲೆಯ ಭೀತಿ ಕಂಡಬರುತ್ತಿದ್ದು, ಎಲ್ಲಾ ರಾಜ್ಯಗಳು ಕಟ್ಟೆಚ್ಚರ ವಹಿಸುವಂತೆ ಕೇಂದ್ರ ಸರಕಾರ ತಿಳಿಸಿದೆ. ಇದೀಗ ಕೋವಿಡ್ ನಾಲ್ಕನೇ ಅಲೆಯಿಂದ ಪಾರಾಗಲು ಕೋವಿಡ್ ಲಸಿಕೆಯ ಮೂರನೇ ಡೋಸ್ ಹಾಕಿಕೊಳ್ಳಿ ಎಂದು ರಾಜ್ಯ ಆರೊಗ್ಯ ಸಚಿವ ಡಾ. ಕೆ ಸುಧಾಕರ್ ಸಲಹೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ಪ್ರಧಾನಿ ಮೋದಿ ಎಲ್ಲಾ ರಾಜ್ಯಗಳ ಸಿಎಂ ಜೊತೆ ಸಭೆ ನಡೆಸಲಿದ್ದು, ಬಳಿಕ ರಾಜ್ಯಗಳ ಸ್ಥಿತಿಗತಿ ಬಗ್ಗೆ ಅವಲೋಕನೆ ಮಾಡುತ್ತಾರೆ. ಕೊರೊನಾ 4ನೇ ಅಲೆ ತಡೆಯುವುದರ ಬಗ್ಗೆ ಸಲಹೆಯನ್ನೂ ನೀಡಲಿದ್ದಾರೆ ಎಂದು ಸಚಿವ ಕೆ. ಸುಧಾಕರ್ ಹೇಳಿದ್ದಾರೆ.

ಲಸಿಕಾ ಅಭಿಯಾನದಿಂದ 3ನೇ ಅಲೆಯಲ್ಲಿ ಹೆಚ್ಚು ಸಾವು ನೋವು ಉಂಟಾಗಿರಲಿಲ್ಲ. ಈವರೆಗೆ ರಾಜ್ಯದಲ್ಲಿ 10 ಕೋಟಿ ಲಸಿಕೆ ನೀಡಲಾಗಿದೆ ಎಂದರು. ಲಸಿಕೆಯ ಎರಡು ಡೋಸನ್ನು ಕಡ್ಡಾಯವಾಗಿ ಪಡೆಯಬೇಕು. 3 ನೇ ಡೋಸ್ 55% ಮಾತ್ರ ಆಗಿದೆ. ಕೂಡಲೇ ಜನರು 3ನೇ ಡೋಸ್ ತೆಗೆದುಕೊಳ್ಳಿ, ನಾಲ್ಕನೇ ಅಲೆಗೆ ಕಾಯಬೇಡಿ ಎಂದು ಸಲಹೆ ನೀಡಿದ್ದಾರೆ.

ಜೊತೆಗೆ ಕೋವಿಡ್ ತಡೆಯಲು ಮಾಸ್ಕ್ ಕಡ್ಡಾಯವಾಗಿ ಹಾಕಿ, ಸಾಮಾಜಿಕ ಅಂತರ ಕಾಪಾಡುವಂತೆ ವಿನಂತಿಸಿದರು.  

Join Whatsapp
Exit mobile version