Home ಟಾಪ್ ಸುದ್ದಿಗಳು ರಾಮನವಮಿ ವೇಳೆ ದೇವಸ್ಥಾನದಲ್ಲಿ ಅವಘಡ: ದೇವಸ್ಥಾನದ ಬಾವಿಗೆ ಬಿದ್ದ 25ಕ್ಕೂ ಅಧಿಕ ಭಕ್ತರು

ರಾಮನವಮಿ ವೇಳೆ ದೇವಸ್ಥಾನದಲ್ಲಿ ಅವಘಡ: ದೇವಸ್ಥಾನದ ಬಾವಿಗೆ ಬಿದ್ದ 25ಕ್ಕೂ ಅಧಿಕ ಭಕ್ತರು

ಇಂದೋರ್: ಇಂದೋರ್’ನ ಶ್ರೀ ಬೆಲೇಶ್ವರ ಮಹಾದೇವ್ ಜುಲೇಲಾಲ್ ದೇವಸ್ಥಾನದಲ್ಲಿ ನೆಲ ಕುಸಿದ ಪರಿಣಾಮ 25 ಕ್ಕೂ ಹೆಚ್ಚು ಜನರು ಬಾವಿಗೆ ಬಿದ್ದ ಘಟನೆ ನಡೆದಿದೆ.


ರಾಮನವಮಿಯ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ದೇವಾಲಯವು ಜನಸಂದಣಿಗೆ ಸಾಕ್ಷಿಯಾಗಿದೆ. ಮೆಟ್ಟಿಲು ಬಾವಿಯ ಮೇಲ್ಛಾವಣಿ ಕುಸಿದಿದ್ದು, ಇದು ಅಪಘಾತಕ್ಕೆ ಕಾರಣವಾಗಿದೆ ಎಂದು ವರದಿಯಾಗಿದೆ.
ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಇಂದೋರ್ ಕಲೆಕ್ಟರ್ ಮತ್ತು ಇಂದೋರ್ ಆಯುಕ್ತರೊಂದಿಗೆ ದೂರವಾಣಿ ಮೂಲಕ ಪರಿಸ್ಥಿತಿಯನ್ನು ಚರ್ಚಿಸಿ, ಅಗತ್ಯ ಸೂಚನೆಗಳನ್ನು ನೀಡಿದರು ಎಂದು ತಿಳಿದುಬಂದಿದೆ.


ಈವರೆಗೆ 10 ಭಕ್ತರನ್ನು ರಕ್ಷಿಸಲಾಗಿದ್ದು, 9 ಮಂದಿ ಸುರಕ್ಷಿತವಾಗಿದ್ದಾರೆ ಎಂದು ಸಿಎಂ ಹೇಳಿದ್ದಾರೆ.


“ರಕ್ಷಿಸಲ್ಪಟ್ಟ ಎಲ್ಲರನ್ನೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ” ಎಂದು ಸಂಸದ ಶಂಕರ್ ಲಾಲ್ವಾನಿ ಹೇಳಿದರು.
ಅಗ್ನಿಶಾಮಕ ದಳ, ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್, ಜಿಲ್ಲಾಡಳಿತ ಮತ್ತು ಪೊಲೀಸರ ಜಂಟಿ ಕಾರ್ಯಾಚರಣೆ ನಡೆಯುತ್ತಿದೆ ಎಂದು ಲಾಲ್ವಾನಿ ಹೇಳಿದರು.

Join Whatsapp
Exit mobile version