Home ಟಾಪ್ ಸುದ್ದಿಗಳು ಸೌಜನ್ಯಾ ಕುಟುಂಬದ ರಕ್ಷಣೆಗೆ ನಮ್ಮ ಸರ್ಕಾರ ಬದ್ಧ: ಕಾಂಗ್ರೆಸ್

ಸೌಜನ್ಯಾ ಕುಟುಂಬದ ರಕ್ಷಣೆಗೆ ನಮ್ಮ ಸರ್ಕಾರ ಬದ್ಧ: ಕಾಂಗ್ರೆಸ್

ಬೆಂಗಳೂರು: ಧರ್ಮಸ್ಥಳದ ಸೌಜನ್ಯಾ ಕುಟುಂಬದ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಕಾಂಗ್ರೆಸ್ ಹೇಳಿದೆ.


ಈ ಬಗ್ಗೆ ‘ಎಕ್ಸ್’ ನಲ್ಲಿ ಬರೆದುಕೊಂಡಿರುವ ಕಾಂಗ್ರೆಸ್, ’ಧರ್ಮವೆಂದರೆ ನ್ಯಾಯ, ನ್ಯಾಯವನ್ನು ಕೇಳುವುದು ಕೂಡ ಧರ್ಮವೇ.. ಸೌಜನ್ಯಾ ಕುಟುಂಬದ ರಕ್ಷಣೆಗೆ ನಮ್ಮ ಸರ್ಕಾರ ಬದ್ದವಾಗಿದೆ. ಸಂತ್ರಸ್ತ ಕುಟುಂಬದ ಮೇಲಿನ ಹಲ್ಲೆ, ಬೆದರಿಕೆಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ’ ಎಂದು ಹೇಳಿದೆ.


ಅಲ್ಲದೆ, ’ನೊಂದ ಕುಟುಂಬದ ಮೇಲೆ ದಬ್ಬಾಳಿಕೆ ನಡೆಸುವುದನ್ನು ಧರ್ಮ ಎನ್ನಲಾಗದು. ಪೊಲೀಸರು ಸೌಜನ್ಯಾ ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸಲಿದ್ದಾರೆ’ ಎಂದು ಹೇಳಿದೆ.
ಶುಕ್ರವಾರ ಉಜಿರೆಯಲ್ಲಿ ನಡೆದ ‘ಅಖಿಲ ಕರ್ನಾಟಕ ಶ್ರೀ ಮಂಜುನಾಥ ಸ್ವಾಮಿ ಭಕ್ತವೃಂದ’ ಸಂಘಟನೆಯ ಪ್ರತಿಭಟನೆ ವೇಳೆ ಸೌಜನ್ಯಾ ಕುಟುಂಬದ ಮೇಲೆ ಹಲ್ಲೆ ಯತ್ನವನ್ನು ಉಲ್ಲೇಖಿಸಿ ಕಾಂಗ್ರೆಸ್ ಹೀಗೆ ಹೇಳಿದೆ.

Join Whatsapp
Exit mobile version