Home ಟಾಪ್ ಸುದ್ದಿಗಳು ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಸಂಸದ

ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಸಂಸದ

ಕೋಲ್ಕೊತಾ: ಟಿಎಂಸಿ ಸಂಸದರೊಬ್ಬರು ಟೋಲ್ ಗೇಟ್ ಬಳಿ ಕಾರು ನಿಲ್ಲಿಸಿದ ಎಂದು ಟೋಲ್ ಪ್ಲಾಜಾ ಸಿಬ್ಬಂದಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ.


ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರಿಂದ ಆಕ್ರೋಶ ವ್ಯಕ್ತವಾಗಿದೆ.


ಟಿಎಂಸಿ ಸಂಸದ ಸುನೀಲ್ ಮಂಡಲ್ ಅವರು ಕಾರಿನಲ್ಲಿ ಚಲಿಸುವಾಗ ಬುರ್ದ್ವಾನ್ ಜಿಲ್ಲೆಯ ಪಲಸಿತ್ ಪ್ರದೇಶದ ಟೋಲ್ ಗೇಟ್ ಬಳಿ ಅವರ ಕಾರನ್ನು ಟೋಲ್ ಗೇಟ್ ಸಿಬ್ಬಂದಿಯು ತಡೆಯುತ್ತಾರೆ. ಇದರಿಂದ ಕುಪಿತಗೊಂಡ ಸಂಸದ ಕಾರಿನಿಂದ ಇಳಿದು ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ.


ನನ್ನ ಕಾರನ್ನೇ ನಿಲ್ಲಿಸುತ್ತೀಯಾ ಎಂಬ ರೀತಿಯಲ್ಲಿ ಟೋಲ್ ಗೇಟ್ ಸಿಬ್ಬಂದಿ ಮೇಲೆ ಸಂಸದ ಎರಗಿದ್ದಾರೆ. ಕೂಡಲೇ ಅಲ್ಲಿದ್ದವರು ಸಂಸದರನ್ನು ಸಮಾಧಾನಪಡಿಸಿ, ಮತ್ತೆ ಕಾರಿನಲ್ಲಿ ಕೂರಿಸಿದ್ದಾರೆ.

Join Whatsapp
Exit mobile version