Home ಟಾಪ್ ಸುದ್ದಿಗಳು ಸೆಪ್ಟೆಂಬರ್ 20ರಿಂದ 30ರವರೆಗೆ ಮೋದಿ ಸರಕಾರದ ವಿಫಲತೆ ವಿರುದ್ಧ ದೇಶದೆಲ್ಲೆಡೆ ಪ್ರತಿಭಟನೆ

ಸೆಪ್ಟೆಂಬರ್ 20ರಿಂದ 30ರವರೆಗೆ ಮೋದಿ ಸರಕಾರದ ವಿಫಲತೆ ವಿರುದ್ಧ ದೇಶದೆಲ್ಲೆಡೆ ಪ್ರತಿಭಟನೆ

ನವದೆಹಲಿ: ಎಲ್ಲ ರಾಜ್ಯಗಳ ಹಕ್ಕುಗಳನ್ನು ಕಸಿಯುತ್ತಿರುವ ಬಿಜೆಪಿ, ದೇಶದ ಒಕ್ಕೂಟ ವ್ಯವಸ್ಥೆಯನ್ನು ನಾಶಪಡಿಸುತ್ತಿದೆ. ರಾಜ್ಯಗಳ ಹಕ್ಕುಗಳನ್ನು ಕಸಿಯುವ, ಮೊಟಕು ಮಾಡುವ, ರಾಜ್ಯಗಳನ್ನು ಅಗೌರವದಿಂದ ಕಾಣುವ ಬಿಜೆಪಿ ನೀತಿಯಿಂದಾಗಿ ದೇಶದ ಒಕ್ಕೂಟ ವ್ಯವಸ್ಥೆಯು ಕುಸಿಯುತ್ತಿದೆ ಎಂದು ತಮಿಳುನಾಡಿನ ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಅವರು ಮೋದಿ ಸರಕಾರದ ಮೇಲೆ ವಾಗ್ದಾಳಿ ನಡೆಸಿದ್ದಾರೆ.


ಸೋನಿಯಾ ಗಾಂಧಿ ಕರೆದಿದ್ದ ಪ್ರತಿಪಕ್ಷಗಳ ವರ್ಚ್ಯುಯಲ್ ಸಮಾವೇಶದಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಆಳಿದ ಯಾವುದೇ ಪಕ್ಷವು ಇಲ್ಲಿಯವರೆಗೆ ರಾಜ್ಯಗಳ ಹಕ್ಕುಗಳನ್ನು ಇಷ್ಟೊಂದು ಕೆಟ್ಟ ರೀತಿಯಲ್ಲಿ ಅವಮಾನಿಸಿದ್ದಿಲ್ಲ. 2024ರ ಚುನಾವಣೆಯಲ್ಲಿ ಮೋದಿ ಸರಕಾರವನ್ನು ಸೋಲಿಸುವ ಗುರಿಯೊಡನೆ ನಾವು ಒಗ್ಗಟ್ಟಿನ ಹೋರಾಟ ನೀಡಬೇಕು ಎಂದರು.

ಒಟ್ಟು 19 ಪಕ್ಷಗಳು ಈ ಸಮಾವೇಶದಲ್ಲಿ ಭಾಗವಹಿಸಿದವು. ಸೆಪ್ಟೆಂಬರ್ 20ರಿಂದ 30ರವರೆಗೆ ದೇಶಾದ್ಯಂತ ಪ್ರತಿಭಟನೆ ನಡೆಸುವ ಯೋಜನೆಯನ್ನು ಈ ಪಕ್ಷಗಳು ಪ್ರಕಟಿಸಿದವು. ಎಲ್ಲ ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ ನೇತೃತ್ವದಲ್ಲಿ ರಾಜ್ಯಗಳ ನ್ಯಾಯಬದ್ಧ ಹಕ್ಕುಗಳಿಗೆ ಹೋರಾಡುವ ನಿರ್ಣಯ ತೆಗೆದುಕೊಂಡವು. ಮೋದಿ ಸರಕಾರದ ಹೀನಾಯ ಜನವಿರೋಧಿ ಆಡಳಿತದ ವಿರುದ್ಧ ಎಲ್ಲ ಕಡೆ ಪ್ರತಿಭಟನೆ ಹಮ್ಮಿಕೊಳ್ಳುವ ತೀರ್ಮಾನ ತೆಗೆದುಕೊಳ್ಳಲಾಯಿತು.

Join Whatsapp
Exit mobile version