Home ಕರಾವಳಿ ಸಾಮಾಜಿಕ ನ್ಯಾಯದ ತಳಹದಿಯಲ್ಲಿ ರಾಷ್ಟ್ರ ನಿರ್ಮಾಣವಾಗಲಿ: ಅಜ್ಮಲ್ ಇಸ್ಮಾಯಿಲ್

ಸಾಮಾಜಿಕ ನ್ಯಾಯದ ತಳಹದಿಯಲ್ಲಿ ರಾಷ್ಟ್ರ ನಿರ್ಮಾಣವಾಗಲಿ: ಅಜ್ಮಲ್ ಇಸ್ಮಾಯಿಲ್

ಉಪ್ಪಳ: ದೇಶದಲ್ಲಿ ಸಂಘಪರಿವಾರ ಫ್ಯಾಶಿಸ್ಟ್ ಶಕ್ತಿಗಳನ್ನು ಪರಾಭವಗೊಳಿಸಿ ಪ್ರಜಾಪ್ರಭುತ್ವ ರಾಷ್ಟ್ರವನ್ನು ಪುನರ್ ನಿರ್ಮಾಣ ಮಾಡಲು ಸಾಮೂಹಿಕ ಪ್ರಜಾಪ್ರಭುತ್ವದ ವ್ಯಾಪ್ತಿಯಲ್ಲಿ ಹೊಂದುವ ಆದರ್ಶ ರಾಜಕಾರಣಕ್ಕೆ ಮಾತ್ರವೇ ಸಾಧ್ಯ ಎಂದು ಎಸ್.ಡಿ.ಪಿ.ಐ ಕೇರಳ ರಾಜ್ಯ ಕೋಶಾಧಿಕಾರಿ ಅಜ್ಮಲ್ ಇಸ್ಮಾಯೀಲ್ ಹೇಳಿದ್ದಾರೆ.


ಈ ದೇಶವನ್ನು ಕಪ್ಪು ಹಣ ಹಾಗೂ ಬ್ಲಾಕ್ ಮೇಲ್ ರಾಜಕೀಯದ ವಕ್ತಾರರು ಆಳುತ್ತಿದ್ದಾರೆ. ಕೊರೋನಾ ನಿಭಾಯಿಸುವ ಸಂಬಂಧ ಅವೈಜ್ಞಾನಿಕ ನೀತಿಗಳನ್ನು ಜನ ಸಾಮಾನ್ಯನ ತಲೆಯ ಮೇಲೆ ಹೊರಿಸಲಾಗುತ್ತಿದೆ. ಅನ್ಯಾಯವಾಗಿ ದಂಡ ಹಾಕಿ ಕೇರಳದ ಜನಸಾಮಾನ್ಯನ ಜೇಬನ್ನು ದರೋಡೆಗೈದು ಹಾಗೂ ಲಾಕ್ ಡೌನ್ ಸಮಯದಲ್ಲಿ ಹಸಿವನ್ನು ನೀಗಿಸಲು ಬೇಕಾಗಿ ಮನೆಯಿಂದ ಹೊರಬಂದ ಬಡ ಜನರನ್ನು ಪೋಲೀಸನ್ನು ಬಲ ಪ್ರಯೋಗಿಸಿ ಹಲ್ಲೆ ನಡೆಸಿ ರಾಜ್ಯದಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಕಮ್ಯುನಿಷ್ಟ್ ಪಕ್ಷವು ಜನ ವಿರೋಧಿ ಸರಕಾರವಾಗಿ ಪರಿವರ್ತನೆಗೊಂಡಿತು ಎಂದು ಅವರು ಆರೋಪಿಸಿದರು.
ಎಸ್.ಡಿ.ಪಿ.ಐ ಮಂಜೇಶ್ವರ ಮಂಡಲ ಪ್ರತಿನಿಧಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.


ಜಿಲ್ಲಾ ಉಪಾಧ್ಯಕ್ಷ ಇಕ್ಬಾಲ್ ಹೊಸಂಗಡಿ, ಅನ್ಸಾರ್ ಹೊಸಂಗಡಿ, ಮುಬಾರಕ್ ಕಡಂಬಾರ್, ಎನ್ ಅಬ್ದುಲ್ ಹಮೀದ್ , ಪಿ.ಕೆ ಶಬೀರ್ ಮುಂತಾದವರು ಸಭೆಯನ್ನುದ್ದೇಶಿಸಿ ಭಾಷಣ ಮಾಡಿದರು.
ಜಿಲ್ಲಾ ಜೊತೆ ಕಾರ್ಯದರ್ಶಿ ಖಾದರ್ ಅರಫ ಚುನಾವಣೆಯನ್ನು ನಡೆಸಿದರು. ಹೊಸ ಮಂಡಲ ಪದಾಧಿಕಾರಿಗಳಾಗಿ ಅಶ್ರಫ್ ಬಡಾಜೆ( ಅಧ್ಯಕ್ಷರು), ಅನ್ಸಾರ್ ಗಾಂಧಿನಗರ, ಅಲಿ ಶಾಮ (ಉಪಾಧ್ಯಕ್ಷರು ), ಮುಬಾರಕ್ ಕಡಂಬಾರ್ (ಕಾರ್ಯದರ್ಶಿ), ಯಾಕೂಬ್ ,ಆರಿಫ್ ಖಾದರ್ ( ಜೊತೆ ಕಾರ್ಯದರ್ಶಿಗಳು ) ಎನ್, ಅಬ್ದುಲ್ ಹಮೀದ್ ( ಕೋಶಾಧಿಕಾರಿ), ಶರೀಫ್ ಪಾವೂರ್, ಸಲಾಂ ಮಂಜೇಶ್ವರ ಮುಂತಾದವರನ್ನು ಸದಸ್ಯರನ್ನಾಗಿಯೂ ಆರಿಸಲಾಯಿತು.

Join Whatsapp
Exit mobile version