ಆಪರೇಷನ್ ಸಿಂಧೂರ: ರಾಷ್ಟ್ರಪತಿ ಭೇಟಿಯಾದ ಪ್ರಧಾನಿ, ನಾಳೆ ಸರ್ವಪಕ್ಷ ಸಭೆ

- Advertisement -

ನವದೆಹಲಿ: ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ಗುರಿಯಾಗಿಸಿ ಸಶಸ್ತ್ರ ಪಡೆ ನಡೆಸಿರುವ ದಾಳಿಯ ಕುರಿತು ವಿವರಿಸಲು ಕೇಂದ್ರ ಸರ್ಕಾರವು ನಾಳೆ (ಗುರುವಾರ) ಸರ್ವಪಕ್ಷ ಸಭೆ ಕರೆದಿದೆ.

- Advertisement -

ಈ ಕುರಿತು ಸಂಸದೀಯ ವ್ಯವಹಾರಗಳ ಸಚಿವರಾದ ಕಿರಣ್ ರಿಜಿಜು ಮಾಹಿತಿ ನೀಡಿದ್ದಾರೆ. ಸಂಸತ್ ಆವರಣದಲ್ಲಿ ಗುರುವಾರ ಬೆಳಿಗ್ಗೆ 11ಗಂಟೆಗೆ ಸಭೆ ನಡೆಯಲಿದೆ.

ಏತನ್ಮಧ್ಯೆ ಕೇಂದ್ರ ಸಂಪುಟ ಸಭೆಯ ಬೆನ್ನಲ್ಲೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ದಾಳಿಯ ಕುರಿತು ವಿವರಣೆ ನೀಡಿದ್ದಾರೆ.

- Advertisement -

ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ಉಗ್ರರ ಕೃತ್ಯಕ್ಕೆ ಪ್ರತೀಕಾರವಾಗಿ ಭಾರತೀಯ ಸಶಸ್ತ್ರ ಪಡೆ ‘ಆಪರೇಷನ್ ಸಿಂಧೂರ’ ನಡೆಸಿ ಪರಾಕ್ರಮ ಮೆರೆದಿದೆ. ಆ ಮೂಲಕ ಪಾಕ್‌ಗೆ ತಕ್ಕ ತಿರುಗೇಟು ನೀಡಿದೆ.

- Advertisement -


Must Read

Related Articles