Home ಟಾಪ್ ಸುದ್ದಿಗಳು ಕಾಪು ಪುರಸಭೆಯಲ್ಲಿ ಆಪರೇಷನ್ ಕಮಲ : ಕಾನೂನು ಹೋರಾಟಕ್ಕೆ SDPI ತೀರ್ಮಾನ

ಕಾಪು ಪುರಸಭೆಯಲ್ಲಿ ಆಪರೇಷನ್ ಕಮಲ : ಕಾನೂನು ಹೋರಾಟಕ್ಕೆ SDPI ತೀರ್ಮಾನ

ಕಾಪು: ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯ ದಿನವೇ ಹೈಡ್ರಾಮ ನಡೆದಿದ್ದು, SDPI ಬೆಂಬಲಿತ ಪುರಸಭೆ ಸದಸ್ಯೆ ಸರಿತಾ ಬಿಜೆಪಿ ಸೇರ್ಪಡೆಯಾಗಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಎಸ್ ಡಿ ಪಿ ಐ ಪಕ್ಷ ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಸೂಚಿಸಿ ತಮ್ಮ ಸದಸ್ಯರಿಗೆ ವಿಪ್ ಜಾರಿಮಾಡಿತ್ತು. ಆದರೆ ಪಕ್ಷದ ವಿಪ್ ಉಲ್ಲಂಘಿಸಿರುವ ಸರಿತಾ ಬಿಜೆಪಿ ಸೇರ್ಪಡೆಯಾಗಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾದ ಎಸ್ ಟಿ ಮಹಿಳಾ ಅಭ್ಯರ್ಥಿ ಇಲ್ಲದ ಕಾರಣಕ್ಕೆ ಆಪರೇಷನ್ ಕಮಲ ಮಾಡಿ ಎಸ್ ಡಿಪಿಐ ಬೆಂಬಲಿತ ಸದಸ್ಯರಾಗಿದ್ದ ಎಸ್ ಟಿ ಸಮುದಾಯದ ಸರಿತಾ ಅವರನ್ನು ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

23 ಸದಸ್ಯ ಬಲದ ಕಾಪು ಪುರಸಭೆಯಲ್ಲಿ ಬಿಜೆಪಿ 19, ಕಾಂಗ್ರೆಸ್ 7, ಎಸ್ ಡಿ ಪಿ ಐ 3 ಮತ್ತು ಜೆಡಿಎಸ್ 1 ಸದಸ್ಯರನ್ನು ಹೊಂದಿದೆ. ಸ್ಥಳೀಯ ಶಾಸಕರು ಮತ್ತು ಸಂಸದರ ಮತಗಳು ಸೇರಿ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ 16 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿಗೆ ಇಬ್ಬರು ಎಸ್ ಡಿಪಿಐ ಸದಸ್ಯರ ಮತಗಳು ಸೇರಿ 9 ಮತಗಳು ಬಿದ್ದಿವೆ. ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಸೇರಿ ಅಭ್ಯರ್ಥಿಯಾದ ಸರಿತಾ ಅವರಿಗೆ 16 ಮತಗಳು ಬಿದ್ದರೆ, ಕಾಂಗ್ರೆಸ್ ಅಭ್ಯರ್ಥಿ 9 ಮತಗಳನ್ನು ಪಡೆದು ಸೋಲನುಭವಿಸಿದರು.

ಪಕ್ಷದ ವಿಪ್ ಉಲ್ಲಂಘಿಸಿ ಬಿಜೆಪಿ ಸೇರಿ ಪಕ್ಷದ್ರೋಹ ಮಾಡಿರುವ ಸರಿತಾ ಅವರ ಸದಸ್ಯತ್ವ ರದ್ದು ಮಾಡುವಂತೆ ಕೋರಿ ಕಾನೂನು ಹೋರಾಟ ನಡೆಸುವುದಾಗಿ ಎಸ್ ಡಿಪಿಐ ತಿಳಿಸಿದೆ.

ಇದಕ್ಕೂ ಮುನ್ನಾ ಸರಿತಾ ಹಾಗೂ ಅವರ ಪತಿ ಶಿವಾನಂದ್ ಇಂದು ಬಿಜೆಪಿಗೆ ಸೇರ್ಪಡೆಯಾದರು. ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಹಾಗೂ ಕಾಪು ಮಂಡಲ ಬಿಜೆಪಿ ಅಧ್ಯಕ್ಷರಾದ ಜಿತೇಂದ್ರ ಶೆಟ್ಟಿ ಅವರು ಭಾರತೀಯ ಜನತಾ ಪಕ್ಷದ ಬಾವುಟವನ್ನು ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.


Join Whatsapp
Exit mobile version