Home ಟಾಪ್ ಸುದ್ದಿಗಳು “ಒಂದು ರಾಷ್ಟ್ರ,ಒಂದು ಮತದಾರರ ಪಟ್ಟಿ” ಅಕ್ರಮ ಮತದಾನ ಪರಿಶೀಲನೆಗೆ ಸಹಾಯಕ: ಕಿರಣ್ ರಿಜಿಜು

“ಒಂದು ರಾಷ್ಟ್ರ,ಒಂದು ಮತದಾರರ ಪಟ್ಟಿ” ಅಕ್ರಮ ಮತದಾನ ಪರಿಶೀಲನೆಗೆ ಸಹಾಯಕ: ಕಿರಣ್ ರಿಜಿಜು

The Union Minister for Urban Development, Housing & Urban Poverty Alleviation and Information & Broadcasting, Shri M. Venkaiah Naidu addressing at the inauguration of the Social Infrastructure (Local shopping complex, Banquet Hall, Senior Secondary School) under East Kidwai Nagar Redevelopment Project, in New Delhi on October 05, 2016.

ಹೊಸದಿಲ್ಲಿ: ಅಕ್ರಮ ಮತದಾನ ತಡೆಗಟ್ಟಲು ಮತ್ತು ವಿದೇಶದಲ್ಲಿ ಕೆಲಸ ಮಾಡುವ ಭಾರತೀಯರಿಗೆ ಆನ್‌ಲೈನ್ ಮತದಾನದ ಹಕ್ಕು ನೀಡಲು ಮತದಾರರ ಪಟ್ಟಿಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಪ್ರಸ್ತಾಪವನ್ನು ಸರ್ಕಾರ ಪರಿಗಣಿಸುತ್ತಿದೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಲೋಕಸಭೆಗೆ ತಿಳಿಸಿದ್ದಾರೆ.

ಚುನಾವಣಾ ವಂಚನೆ ಗಂಭೀರ ವಿಷಯವಾಗಿದ್ದು, ಇದನ್ನು ತಡೆಯಲು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಅವರು ಹೇಳಿದರು.

ವಿದೇಶದಲ್ಲಿ ಕೆಲಸ ಮಾಡುವ ಭಾರತೀಯರಿಗೆ ಮತದಾನದ ಹಕ್ಕು ನೀಡುವ ಪ್ರಸ್ತಾಪದ ಕುರಿತು ಪ್ರತಿಕ್ರಿಯಿಸಿದ ರಿಜಿಜು, ಇದನ್ನು ಹೇಗೆ ಮಾಡಬಹುದು ಎಂಬುದನ್ನು ಪರಿಶೀಲಿಸಲು ಸರ್ಕಾರ ಚುನಾವಣಾ ಆಯೋಗಕ್ಕೆ ಸೂಚಿಸಿದೆ. ಎಂದು ಹೇಳಿದರು.

ಅಕ್ರಮ ಮತದಾನವನ್ನು ಪರಿಶೀಲಿಸಲು ಮತ್ತು ಪಾರದರ್ಶಕ ಮತದಾನ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ‘ಒಂದು ರಾಷ್ಟ್ರ, ಒಂದು ಮತದಾರರ ಪಟ್ಟಿ’ಯನ್ನು ಸಿದ್ಧಪಡಿಸುವುದು ನಮ್ಮ ಗುರಿಯಾಗಿದೆ, ”ಎಂದು ಅವರು ಹೇಳಿದ್ದಾರೆ.

Join Whatsapp
Exit mobile version